Tuesday, June 16, 2026
spot_imgspot_img
spot_imgspot_img

ಫಿಶ್ ಕರಿಗಾಗಿ ನಡೆಯಿತು ವ್ಯಕ್ತಿಯ ಕೊಲೆ!

- Advertisement -
- Advertisement -

ಗುಜರಾತ್​: ಫಿಶ್​ ಕರಿಗಾಗಿ ವ್ಯಕ್ತಿಯೊಬ್ಬನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್​ನಲ್ಲಿ ನಡೆದಿದೆ. ಮೃತ ವ್ಯಕ್ತಿ ರಂಜಿತ್ ಕುನ್ವರಿಯ (32) ಎನ್ನಲಾಗಿದೆ.

ರಂಜಿತ್ ಕುನ್ವರಿಯ, ಆತನ ಕಸಿನ್​ಗಳಾದ ಅಶೋಕ್, ಸುನಿಲ್ ಮತ್ತು ಪ್ರಕಾಶ್ ಪಾರ್ಟಿಯೊಂದಕ್ಕೆ ಹೋಗಿದ್ದರು. ಡ್ರಿಂಕ್ ಪಾರ್ಟಿ ಮಾಡಿದ ನಂತರ ಅವರು ನದಿಯಲ್ಲಿ ಫಿಶಿಂಗ್​ಗೆ ಹೋದರು. ಅಲ್ಲಿ ಪಿಶ್ ಕರಿ ಮತ್ತು ಅನ್ನ ಮಾಡಿಕೊಂಡು ಭರ್ಜರಿಯಾಗಿ ಊಟ ಮಾಡಲು ಎಲ್ಲ ರೆಡಿ ಮಾಡಿಕೊಂಡರು.

ಫಿಶಿಂಗ್​ಗೆ ಹೋದಾಗ ಅಲ್ಲಿ ಬಹಳಷ್ಟು ಮೀನುಗಳು ಸಿಕ್ಕವು. ಇದರಿಂದ ಸುನಿಲ್​ ತನ್ನ ಅಣ್ಣ ಸಂದೀಪ್​ನನ್ನು ಕೂಡ ಪಾರ್ಟಿಗೆ ಬರುವಂತೆ ಆಹ್ವಾನಿಸಿದ. ಆಗ ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್​ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಹಿಡಿದ. ಆದರೆ, ಸಂದೀಪ್​ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.

ಈ ಅವಮಾನದಿಂದ ಸಂದೀಪ್​ನ ಸೋದರ ಸುನಿಲ್​ಗೆ ಬಹಳ ಕೋಪ ಬಂದು ಅಲ್ಲಿಂದ ಎದ್ದು ಹೋದ. ಆದರೆ, ಕೋಪದಿಂದ ಕಾರು ಸ್ಟಾರ್ಟ್ ಮಾಡಿದ ಸುನಿಲ್ ರಂಜಿತ್​ನನ್ನು ಕಾರಿನ ಕೆಳಗೆ ಬೀಳಿಸಿ ಆತನ ಮೇಲೆ ಕಾರು ಹತ್ತಿಸಿದ. ಇದರಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಸುನಿಲ್ ಅಲ್ಲೇ ಕಾರನ್ನು ಬಿಟ್ಟು ಓಡಿಹೋದ. ಬಳಿಕ ಪೊಲೀಸರು ಸುನಿಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.

- Advertisement -

Related news

error: Content is protected !!