Friday, March 21, 2025
spot_imgspot_img
spot_imgspot_img

ಬಂಟ್ವಾಳ: ರಾತ್ರಿ ವೇಳೆ ಚಿರತೆ ದಾಳಿ; ದನ ಸಾವು

- Advertisement -
- Advertisement -

ಬಂಟ್ವಾಳ: ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ದನವೊಂದನ್ನು ಕೊಂದ ಘಟನೆ ನಡೆದಿದೆ. ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಎಂಬಲ್ಲಿ ನಡೆದಿದೆ. ಕೇಲ್ದೊಡಿ ನಿವಾಸಿ ಶೀನಪ್ಪ ಪೂಜಾರಿ ಅವರ ತೋಟದಲ್ಲಿದ್ದ ದನವನ್ನು ಭಾಗಶಃ ತಿಂದು ಹಾಕಿದೆ.

ಶೀನಪ್ಪ ಪೂಜಾರಿ ಅವರು ಎರಡು ದನಗಳನ್ನು ತೋಟಕ್ಕೆ ಮೇಯಲು ಬಿಟ್ಟಿದ್ದಾರೆ. ಸಂಜೆ ವೇಳೆ ಒಂದು ದನ ಮನೆಗೆ ಬಂದಿರಲಿಲ್ಲ. ಅದು ತೋಟದಲ್ಲಿಯೇ ಮಲಗಿತ್ತು. ಬೆಳಿಗ್ಗೆ ಎದ್ದು ನೋಡುವಾಗ ತೋಟದಲ್ಲಿ ಮಲಗಿದ್ದ ದನ ನಾಪತ್ತೆಯಾಗಿತ್ತು. ಹಾಗಾಗಿ ಹುಡುಕಿದಾಗ ತೋಟದ ಮೂಲೆಯಲ್ಲಿ ಅರ್ಧ ದನದ ಕಳೆ ಬರಹ ಪತ್ತೆಯಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪಶು ವೈದ್ಯಾಧಿಕಾರಿ ಅವಿನಾಶ್ ಭಟ್ ಭೇಟಿ ನೀಡಿದ್ದಾರೆ. ಈ ಹಿಂದೆ ಅನೇಕ ಬಾರಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಚಿರತೆಯನ್ನು ಹಿಡಿದು ಗ್ರಾಮಸ್ಥರಿಗಾಗುವ ತೊಂದರೆಯನ್ನು ತಪ್ಪಿಸುವಂತೆ ಗ್ರಾಮಸ್ಥರು ಇಲಾಖೆಯವರಲ್ಲಿ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!