Monday, September 26, 2022
spot_imgspot_img
spot_imgspot_img

ಬಾಸ್ಕೆಟ್ ಬಾಲ್ ಆಟಗಾರ್ತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ವಿರೋಧಿಸಿದ ಆಟಗಾರ್ತಿಯನ್ನು ಛಾವಣಿಯಿಂದ ತಳ್ಳಿದ ಕಾಮುಕರು

- Advertisement -G L Acharya G L Acharya
- Advertisement -

ಅತ್ಯಾಚಾರಕ್ಕೆ ವಿರೋಧಿಸಿದ್ದಕ್ಕೆ ಬಾಸ್ಕೆಟ್ ಬಾಲ್ ಆಟಗಾರ್ತಿಯನ್ನು ಮೂವರು ಯುವಕರು ಕ್ರೀಡಾಂಗಣದ ಛಾವಣಿಯಿಂದ ಕೆಳಗೆ ತಳ್ಳಿರುವ ಘಟನೆ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.

18 ವರ್ಷದ ಬಾಸ್ಕೆಟ್‌ಬಾಲ್ ಆಟಗಾರ್ತಿ ಮೇಲೆ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ವಿರೋಧಿಸಿದ್ದಳು. ಈ ವೇಳೆ ಆಕೆಯನ್ನು ಅವರು ಕೆಳಕ್ಕೆ ತಳ್ಳಿದ್ದು, ಆಟಗಾರ್ತಿಗೆ ತೀವ್ರ ತರಹದ ಗಾಯಗಳಾಗಿವೆ. ಆಕೆಯ ಕಾಲು ಮತ್ತು ದವಡೆಗೆ ಗಾಯಗಳಾಗಿದ್ದು, ಆಕೆಯನ್ನು ಲುಧಿಯಾನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೀಡಾಭ್ಯಾಸಕ್ಕೆಂದು ಮಗಳು ಕ್ರೀಡಾಂಗಣಕ್ಕೆ ತೆರಳಿದ್ದಳು. ಆಗಸ್ಟ್ 12ರಂದು ಘಟನೆ ಸಂಭವಿಸಿದೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಓರ್ವ ಆರೋಪಿಯನ್ನು ಜತಿನ್ ಕಂಡ ಎಂದು ಗುರುತಿಸಲಾಗಿದೆ. ಈತನೇ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದಾಗ ಆತ ತನ್ನ ಸ್ನೇಹಿತರನ್ನು ಕರೆದುಕೊಮಡು ಆಕೆಯನ್ನು 25 ಅಡಿ ಎತ್ತರದಿಂದ ತಳ್ಳಿದ್ದಾನೆ.

ಆರೋಪಿಗಳ ವಿರುದ್ದ ಐಪಿಸಿ ಕಾಯ್ದೆಯ ವಿಧಿ 307 (ಹತ್ಯೆ ಯತ್ನ) ಮತ್ತು 376 (ಅತ್ಯಾಚಾರ) ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಖುರಾನಾ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!