Sunday, January 16, 2022
spot_imgspot_img
spot_imgspot_img

ಬಿಗ್​ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ..!

- Advertisement -
vtv vitla
vtv vitla
vtv vitla
- Advertisement -

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ನಡೆದಿದೆ.

Kirik Keerthi Age, Height, Weight, Body, Wife or Husband, Caste, Religion,  Net Worth, Assets, Salary, Family, Affairs, Wiki, Biography, Movies, Shows,  Photos, Videos and More
vtv vitla

ಸದಾಶಿವನಗರ ಪಬ್​ ಗೆ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಮೇಲೆ ವ್ಯಕ್ತಿಯೊಬ್ಬ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್​ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್​ ಕೀರ್ತಿ ಕೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕುಪಿತಗೊಂಡ ಆ ವ್ಯಕ್ತಿ ಬಿಯರ್​ ಬಾಟಲ್​ ನಿಂದ ಕಿರಿಕ್​ ಕೀರ್ತಿ ತಲೆಗೆ ಹೊಡೆದಿದ್ದಾನೆ. ಸದ್ಯ ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
- Advertisement -

Related news

error: Content is protected !!