ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಬಿಹಾರ ವಿಧಾನಸಭೆಗೆ ಭೇಟಿ ನೀಡಲಿದ್ದು, ವಿಧಾನಸೌಧದ ನೂರನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ವಿಧಾನಸಭೆಯ ಹೇಳಿಕೆ ಪ್ರಕಾರ ಜುಲೈ12ರಂದು ಮೋದಿ ಬಿಹಾರ ವಿಧಾನಸಭೆಗೆ ಭೇಟಿ ನೀಡಲಿದ್ದಾರೆ. ಮೋದಿ ಭೇಟಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ, ಬಿಹಾರ ವಿಧಾನಸಭೆಗೆ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ಸಿನ್ಹಾ ಅವರು ಮಂಗಳವಾರ ಸಂಜೆ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿ ಮತ್ತು ಡಿಜಿಪಿ ಎಸ್.ಕೆ.ಸೈಗಲ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿನ್ಹಾ, ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲರ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮ್ಯೂಸಿಯಂ ಮತ್ತು ಅತಿಥಿಗೃಹಕ್ಕೆ ಶಂಕುಸ್ಥಾಪನೆ ಮಾಡಲಿದ್ದು, ನೂರನೇ ವರ್ಷದ ಸ್ಮಾರಕ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೋದಿಯವರು ಶತಾಬ್ದಿ ಸ್ಮೃತಿ ಸ್ಥಂಭವನ್ನೂ ಉದ್ಘಾಟಿಸಲಿದ್ದು ಕಲ್ಪತರು ನೆಡಲಿದ್ದಾರೆ.








