- Advertisement -
- Advertisement -

ಕಾಸರಗೋಡು: ಬೇಕಲ ಎಂಬಲ್ಲಿನ ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲದ ಯುವಕನೋರ್ವ ನಾಪತ್ತೆಯಾದ ಘಟನೆ ಭಾನುವಾರ ಸಂಜೆ ನಡೆದಿದ್ದು, ಇಂದು ಯುವಕನ ಮೃತದೇಹ ಕೋಟಿಕುಳಂನಲ್ಲಿ ಪತ್ತೆಯಾಗಿದೆ. ಮೃತ ಯುವಕ ಕೋಲ್ಕತ್ತಾ ನಿವಾಸಿ ಶಫೀವುಲ್ ಇಸ್ಲಾಂ (25) ಎನ್ನಲಾಗಿದೆ.

ಭಾನುವಾರ ಸಂಜೆ ಸಮುದ್ರಕ್ಕೆ ಸ್ನಾನಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಪೊಲೀಸರು, ಮೀನುಗಾರರು ಶೋಧ ನಡೆಸಿದ್ದು, ಪತ್ತೆ ಸಾಧ್ಯವಾಗಿಲ್ಲ. ಇಂದು ಶಫೀವುಲ್ ಇಸ್ಲಾಂ ಮೃತದೇಹ ಕೋಟಿಕುಳಂನ ಸಮೀಪ ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಪತ್ತೆಯಾಗಿದೆ.


- Advertisement -








