Sunday, July 26, 2026
spot_imgspot_img
spot_imgspot_img

ಮಂಗಳೂರು: ಕೋಡಿಕಲ್ ನ ನಾಗಬನ ದ್ವಂಸ ಪ್ರಕರಣವನ್ನು ಖಂಡಿಸಿ ವಿಎಚ್‌ಪಿ ಹಾಗೂ ಬಜರಂಗದಳ ವತಿಯಿಂದ ಸ್ವಯಂ ಪ್ರೇರಿತ ಬಂದ್ ಆಚರಿಸಿ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಕೋಡಿಕಲ್‌‌‌ ಬಳಿಯ ನಾಗಬನಕ್ಕೆ ದುಷ್ಕರ್ಮಿಗಳು ಹಾನಿ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಕೋಡಿಕಲ್ ಮೈದಾನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಕೋಡಿಕಲ್ ಮೈದಾನದಿಂದ ನಾಗಭ್ರಮಸ್ಥಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಸುತ್ತಮುತ್ತಲಿನ ಅಂಗಡಿಗಳನ್ನು ಮುಚ್ಚಲಾಗಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಎಚ್‌ಪಿಯ ಪ್ರಾದೇಶಿಕ ಕಾರ್ಯದರ್ಶಿ ಶರಣ್ ಪಂಪ್‌ವೆಲ್, “ಕೆಲ ಕಿಡಿಗೇಡಿಗಳು ಹಿಂದೂಗಳ ಧಾರ್ಮಿಕ ಕೇಂದ್ರಕ್ಕೆ ಹಾನಿ ಮಾಡಿ ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ದುರದೃಷ್ಟಕರ. ಮೊದಲ ಘಟನೆ ಪಣಂಬೂರಿನಲ್ಲಿ, ಎರಡನೆಯದು ಕುಳೂರಿನಲ್ಲಿ ಮತ್ತು ಈಗ ಕೋಡಿಕಲ್‌ನಲ್ಲಿ ಸಂಭವಿಸಿದೆ.

ಕುಳೂರು ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳಿದ್ದಾರೆ. ಮಾನಸಿಕ ಅಸ್ವಸ್ಥನೊಬ್ಬ ಹಿಂದೂ ಪೂಜಾ ಸ್ಥಳವನ್ನು ಮಾತ್ರ ಕೆಡುವುದು ಹೇಗೆ? ಮಾನಸಿಕ ಅಸ್ವಸ್ಥನೊಬ್ಬ ಕೂಳೂರು ಪ್ರಕರಣಕ್ಕೆ ಜೈಲು ಸೇರಿದ್ದರೆ ಪಣಂಬೂರು, ಕೋಡಿಕಲ್ ನಲ್ಲಿ ಮಾಡಿದ್ದು ಯಾರು?” ಎಂದು ಪ್ರಶ್ನಿಸಿದ್ದಾರೆ.

ಇನ್ನು ಇದೇ ಘಟನೆ ಮಸೀದಿ ಅಥವಾ ಚರ್ಚ್‌ಗಳಲ್ಲಿ ನಡೆದಿದ್ದರೆ ಅವರು ಸುಮ್ಮನಿರುತ್ತಾರಾ? ಇಂತಹ ದುಷ್ಕರ್ಮಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಬೇಕು. ಮುಖ್ಯಮಂತ್ರಿಗಳು ಕರಾವಳಿ ಜಿಲ್ಲೆಯ ಮೇಲೆ ಇನ್ನಾದರೂ ಕಣ್ಣಿಡಬೇಕು. ಹಿಂದುತ್ವಕ್ಕಾಗಿ ನಾವು ಅವರಿಗೆ ಮತ ಹಾಕಿದ್ದೇವೆ. ಹಿಂದೂ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಿದ ಆರೋಪಿಗಳನ್ನು ಬಂಧಿಸುವಂತೆ ನಾವು ಒತ್ತಾಯಿಸುತ್ತೇವೆ” ಎಂದು ವಿಎಚ್‌ಪಿಯ ಪ್ರಾದೇಶಿಕ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

- Advertisement -

Related news

error: Content is protected !!