Tuesday, June 30, 2026
spot_imgspot_img
spot_imgspot_img

ಮಂಗಳೂರು: ಪಡಿತರ ಅಕ್ಕಿ ಅಕ್ರಮ ರವಾನೆ ; ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ರವಾನೆ ಮಾಡುತ್ತಿದ್ದ ಆರೋಪದಡಿಯಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.

ಬಂಧಿತರನ್ನು ಮುಸ್ತಫಾ (40) ಹಾಗೂ ಮೊಹಮ್ಮದ್ ಖಲಂದರ್(38) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ರಫೀಕ್ ಮತ್ತು ರಮೀಝ್ ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳು ಕೆಲವು ರೇಶನ್ ಅಂಗಡಿ ದಾಸ್ತಾನು ಕೊಠಡಿ ಹಾಗೂ ಸಾರ್ವಜನಿಕರಿಂದ ಕಡಿಮೆ ದರಕ್ಕೆ ಅಕ್ಕಿ ಖರೀದಿ ಮಾಡಿ ಅದನ್ನು ಮೈಸೂರಿನ ಮಿಲ್‌ಗೆ ರವಾನಿಸುತ್ತಿದ್ದರು ಎನ್ನಲಾಗಿದೆ.

ಮುಸ್ತಫಾ (40) ಹಾಗೂ ಮೊಹಮ್ಮದ್ ಖಲಂದರ್(38)

ಮಾಡೂರಿನಲ್ಲಿ ದಾಸ್ತಾನು ಕೊಠಡಿ ಉಪಯೋಗಿಸಿ ಈ ಕೃತ್ಯ ಎಸಗುತ್ತಿದ್ದರು ಎಂಬ ಮಾಹಿತಿ ಆಹಾರ ನಾಗರಿಕ ಪೂರೈಕೆ ಇಲಾಖೆ ಹಾಗೂ ಉಳ್ಳಾಲ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಡೂರುನಲ್ಲಿ ದಾಸ್ತಾನಿರಿಸಿದ್ದ ಅಕ್ರಮ ಅಕ್ಕಿ ವಶಕ್ಕೆ ಪಡೆದಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

- Advertisement -

Related news

error: Content is protected !!