Sunday, September 13, 2026
spot_imgspot_img
spot_imgspot_img

ಮಂಗಳೂರು: ಮೃತದೇಹದಿಂದ ಕಾಣೆಯಾದ ವಜ್ರದ ಕಿವಿ ಓಲೆ; ಸಿಸಿಟಿವಿ ದೃಶ್ಯದಲ್ಲಿ ಬಯಲಾಯ್ತು ನಿಜಾಂಶ

- Advertisement -
- Advertisement -

ಮಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಶವಾಗಾರದಲ್ಲಿ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರದ ಓಲೆಯನ್ನು ಕದ್ರಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪಡೀಲ್ ನಿವಾಸಿ ಪ್ರಸ್ತುತ ಬಳ್ಳಾಲ್ ಬಾಗ್ ನಲ್ಲಿ ವಾಸವಿದ್ದ ಹರೀಶ್ ಶೆಟ್ಟಿ(45) ಆ. 19ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೃತದೇಹವನ್ನು ಖಾಸಗಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಮೃತರ ದೇಹದ ಮೇಲಿದ್ದ ಚಿನ್ನದ ಸರವನ್ನು ತಗೆಯಲಾಗಿತ್ತು, ಆದರೆ ಕಿವಿಯಲ್ಲಿನ ವಜ್ರದ ಓಲೆ ಹಾಗೆಯೇ ಬಿಡಲಾಗಿದ್ದು, ಅಂತ್ಯಕ್ರಿಯೆ ಸಂದರ್ಭ ತೆಗೆಯಲು ಯೋಜಿಸಿದ್ದರು, ಆದರೆ ಅಂತ್ಯ ಕ್ರಿಯೆ ಸಂದರ್ಭ ಕಿವಿಯಲ್ಲಿದ್ದ ರಿಂಗ್ ಕಾಣೆಯಾಗಿತ್ತು.

ಈ ಬಗ್ಗೆ ಶವಗಾರದ ಸೆಕ್ಯುರಿಟಿ ಗಾರ್ಡ್ ಬಳಿ, ಕಾಣೆಯಾದ ಇಯರ್ ರಿಂಗ್‌ಗಳ ಬಗ್ಗೆ ಕೇಳಿದಾಗ, ತನಗೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದ. ನಂತರ ಕದ್ರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶವಗಾರದ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದಾಗ ಆತನೇ ಕದ್ದಿರುವುದು ತಿಳಿದುಬಂದಿದೆ. ಅದರ ನಂತರ ಅವರು ಹರೀಶ್ ಶೆಟ್ಟಿಯ ಕುಟುಂಬ ಸದಸ್ಯರಿಗೆ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!