Monday, September 21, 2026
spot_imgspot_img
spot_imgspot_img

ಮಂಜೇಶ್ವರ: ಕಾರು ಹಾಗೂ ಬೈಕ್ ನಡುವೆ ಅಪಘಾತ- ವಿದ್ಯಾರ್ಥಿ ದಾರುಣ ಸಾವು

- Advertisement -
- Advertisement -

ಮಂಜೇಶ್ವರ: ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ರವಿವಾರ ರಾತ್ರಿ ತಾಲೂಕಿನ ಉಪ್ಪಳ ಹಿದಾಯತ್ ನಗರದಲ್ಲಿ ನಡೆದಿದೆ.

ಉಪ್ಪಳ ತುರ್ತಿಮಲಬಾರ್ ನಗರದ ಅಬೂಬಕ್ಕರ್ ಇಶಾನ್(19) ಮೃತಪಟ್ಟ ವಿದ್ಯಾರ್ಥಿ. ಈತ ಪ್ಲಸ್ ಟು ವಿದ್ಯಾರ್ಥಿಯಾಗಿದ್ದ.

vtv vitla
vtv vitla

ಇಶಾನ್ ಸಂಚರಿಸುತ್ತಿದ್ದ ಬೈಕ್ ಮತ್ತು ಕಾರಿನ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಇಶಾನ್ ನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತ ದೇಹವನ್ನು ಮಂಗಲ್ಪಾಡಿ ಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!