Wednesday, August 5, 2026
spot_imgspot_img
spot_imgspot_img

ಮುಂದಿನ 25 ವರ್ಷದ ಗುಜರಾತ್‌ ನ ಭವಿಷ್ಯ ಈ ಚುನಾವಣೆಯಿಂದ ನಿರ್ಧಾರ; ಪ್ರಧಾನಿ ಮೋದಿ

- Advertisement -
- Advertisement -

ಗುಜರಾತ್‌ನ ಮುಂದಿನ ಎರಡೂವರೆ ದಶಕಗಳ ಹಣೆಬರಹವನ್ನು ಗುಜರಾತ್‌ನ ಈ ಬಾರಿಯ ವಿಧಾನಸಭಾ ಚುನಾವಣೆ ನಿರ್ಧರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಬನಾಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಎಂಬಲ್ಲಿ ಬಿಜೆಪಿಯ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಯಾರು ಸರ್ಕಾರ ರಚಿಸುತ್ತಾರೆ, ಶಾಸಕರು ಯಾರಾಗುತ್ತಾರೆಂಬುದನ್ನು ನಿರ್ಧರಿಸುವುದಕ್ಕೆ ಈ ಚುನಾವಣೆ ನಡೆಯುತ್ತಿಲ್ಲ. ಬದಲಾಗಿ ಮುಂದಿನ 25 ವರ್ಷದ ಗುಜರಾತ್‌ನ ಭವಿಷ್ಯ ನಿರ್ಧರಿಸುವ ನಿಟ್ಟಿನಲ್ಲಿ ಈ ಚುನಾವಣೆ ಮಹತ್ವ ಪಡೆಯುತ್ತದೆ ಎಂದರು.

ಈವರೆಗೆ ಗುಜರಾತ್ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ಗುಜರಾತ್‌ನಲ್ಲಿ ಮಾಡಿದ ಅಭಿವೃದ್ದಿ ಕೆಲಸಗಳನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಇದಕ್ಕೆ ಬಲಿಷ್ಠ ಸರ್ಕಾರ ಇಲ್ಲಿ ರಚನೆಯಾಗಲು ನಿಮ್ಮ ಸಹಕಾರ ನನಗೆ ಬೇಕು ಎಂದು ಮನವಿ ಮಾಡಿದರು.

ನಾನು ಇಲ್ಲೇ ಹುಟ್ಟಿ ಬೆಳೆದ ಕಾರಣ ಗುಜರಾತಿಗರ ಸಮಸ್ಯೆ ಏನೆಂಬುದನ್ನು ಅರ್ಥೈಸಿಕೊಳ್ಳಬಲ್ಲೆ. ಬಿಜೆಪಿಯನ್ನು ಬನಾಸ್‌ಕಾಂತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಡಿ. ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದರು.

- Advertisement -

Related news

error: Content is protected !!