Monday, June 22, 2026
spot_imgspot_img
spot_imgspot_img

ಮೂಡುಬಿದಿರೆ: ಜಾಗದ ವಿಚಾರದಲ್ಲಿ ವಿವಾದ; ಮಹಿಳೆ ಮೇಲೆ ಹಲ್ಲೆ; ಇಬ್ಬರ ಬಂಧನ..!

- Advertisement -
- Advertisement -

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ ಕಲ್ಲೊಟ್ಟುವಿನಲ್ಲಿ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂದಿ ಸಿದ್ದಾರೆ.

ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್‌ ಬಲ್ಲಾಳ್ ಮತ್ತು ಅವರ ಸ್ನೇಹಿತ ಹರೀಶ್ ಹೆಗ್ಡೆ ಬಂಧಿತರು. ಪಡುಮಾರ್ನಾಡಿನಲ್ಲಿ ಕುಮ್ಮಿ ಹಕ್ಕಿಗೆ ಸಂಬಂಧಿಸಿದಂತೆ ಹರೀಶ್‌ ಮತ್ತು ಶಕುಂತಳ ಮಧ್ಯೆ ವ್ಯಾಜ್ಯ ಇತ್ತೆನ್ನಲಾಗಿದೆ.

ಶುಕ್ರವಾರ ಈ ಜಾಗದಲ್ಲಿ ಶಕುಂತಳಾ ಕಡೆಯವರು ಸಸಿ ನೆಡಲು ಹೋದಾಗ ಹರೀಶ್ ಕಡೆಯವರು ವಿರೋಧ ವ್ಯಕ್ತಪಡಿಸಿದರೆನ್ನಲಾಗಿದೆ. ಈ ವೇಳೆ ಇತ್ತಂಡಗಳ ಮಧ್ಯೆ ಮಾತಿಗೆ ಮಾತು ಬೆಳೆದು ಹರೀಶ್‌ ಮತ್ತು ಅಭಿನಂದನ್ ಅವರು ಶಕುಂತಾಳರಿಗೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!