Saturday, June 6, 2026
spot_imgspot_img
spot_imgspot_img

ಮೂಡುಬಿದಿರೆ: ಬೈಕ್‌ ಸ್ಕಿಡ್‌ ಆಗಿ ಮರಕ್ಕೆ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

- Advertisement -
- Advertisement -

ಮೂಡುಬಿದಿರೆ: ಬೈಕ್ ಸ್ಕಿಡ್ ಆಗಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೆರವುಗೊಳಿಸಿದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆಯ ಬೆಳುವಾಯಿಯಲ್ಲಿ ನಡೆದಿದೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ರಾಣಿಕೇರಿ ನಿವಾಸಿ, ಮೂಲತಃ ಚಿಕ್ಕಮಗಳೂರಿನ ರಾಜೇಶ್ (28)ಮೃತಪಟ್ಟ ದುರ್ದೈವಿ ಯುವಕ.

ರಾಜೇಶ್‌ ಅವರು ಬಾಳೆಹೊನ್ನೂರಿನಲ್ಲಿ ಅಜ್ಜಿಯ ಅಂತ್ಯಸಂಸ್ಕಾರ ಮುಗಿಸಿ, ಮೂಡುಬಿದಿರೆಗೆ ವಾಪಾಸ್‌ ಹೋಗುವ ವೇಳೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಗಾಗಿ ಮರ ಕಡಿದು ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ಮರಕ್ಕೆ ಬೈಕ್‌ ಸ್ಕಿಡ್‌ ಆಗಿ ಡಿಕ್ಕಿ ಹೊಡದಿದೆ. ಬೆಳುವಾಯಿ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜೇಶ್ ಅವರಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಐದು ತಿಂಗಳ ಮಗುವಿದೆ.

- Advertisement -

Related news

error: Content is protected !!