Friday, August 19, 2022
spot_imgspot_img
spot_imgspot_img

ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸಸಿ ವಿತರಣೆ

- Advertisement -G L Acharya G L Acharya
- Advertisement -

ವಿಟ್ಲ: ಮೆಲ್ಕಾರ್ ಮಹಿಳಾ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಜೀಪಮುನ್ನೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ “ಕೋಟಿ ವೃಕ್ಷ” ಯೋಜನೆ ಅಡಿ ಸಸಿ ವಿತರಣಾ ಕಾರ್ಯಕ್ರಮವು ಕಾಲೇಜು ವಠಾರದಲ್ಲಿ ನಡೆಯಿತು.

ಸಜೀಪಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬೀನ ಸಸಿಗಳನ್ನು ವಿತರಿಸಿದರು. ಕಾಲೇಜು ಪ್ರಾಂಶುಪಾಲ ಬಿ.ಕೆ. ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ನಾಯಕಿಯರಾದ ಫಿದಾ ನಹೀಮಾ, ಅವ್ವಮ್ಮ ಮುನಿಷಾ, ಕಚೇರಿ ಸಿಬ್ಬಂದಿ ಹಮೀದ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಮಹಮ್ಮದ್ ಸಿಯಾಬ್ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಅಬ್ದುಲ್ ಮಜೀದ್ ಎಸ್ ವಂದಿಸಿದರು. ಉಪನ್ಯಾಸಕ ಎಂ.ಡಿ. ಮಂಚಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!