Friday, August 19, 2022
spot_imgspot_img
spot_imgspot_img

ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಸತ್ತು ಚುನಾವಣೆ

- Advertisement -G L Acharya G L Acharya
- Advertisement -

ಬಂಟ್ವಾಳ : ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು  ವಿದ್ಯಾರ್ಥಿ ಸಂಸತ್ತು ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ  ಫಿದಾ ನಹೀಮಾ ಹಾಗೂ ಕಾರ್ಯದರ್ಶಿಯಾಗಿ ಅವ್ವಮ್ಮ ಮುನಿಷಾ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಚುನಾವಣೆ ಪ್ರಕ್ರಿಯೆ ಯ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ಈ ವಿದ್ಯಾರ್ಥಿ ಸಂಸತ್ತು  ಚುನಾವಣೆಯನ್ನು ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಡೆಸಲಾಯಿತು. 

ಪದವಿ ಪೂರ್ವ ವಿಭಾಗದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ದ್ವಿತೀಯ ವಾಣಿಜ್ಯ ವಿಭಾಗದ ಇಬ್ಬರು ಮತ್ತು ದ್ವಿತೀಯ ವಿಜ್ನಾನ ವಿಭಾಗದಿಂದ ಇಬ್ಬರು ವಿದ್ಯಾರ್ಥಿನಿಯರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಸಂಸತ್ ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಫಿಧಾ ನಹಿಮಾ ಜಯಗಳಿಸಿರುತ್ತಾಳೆ. ಈಕೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ನೇರಳಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಹಾಗೂ ನೂರ್ ಜಹಾನ್ ದಂಪತಿಗಳ ಪುತ್ರಿ.

ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಸಂಸತ್ ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅವ್ವಮ್ಮ ಮುನಿಷಾ ಜಯಗಳಿಸಿದರು. ಈಕೆ ಕೌಡೇಲು ದಾರುಲ್ ಇಝ್ಝ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿ ಯಾಗಿದ್ದು, ಸಜಿಪ ನಡು ನಿವಾಸಿ ಮುಹಮ್ಮದ್ ಹಾಗೂ ಸಫಿಯಾ ದಂಪತಿಗಳ ಪುತ್ರಿ ಯಾಗಿದ್ದಾರೆ.

 ಚುನಾವಣೆ ಅಧಿಕಾರಿಯಾಗಿ ಎಂಜಲಿನ್ ಸುನಿತಾ ಪಿರೇರಾ,  ನೋಡೆಲ್ ಅಧಿಕಾರಿಯಾಗಿ ಉಪನ್ಯಾಸಕ ಅಬ್ದುಲ್ ಮಜೀದ್  ಎಸ್. ಇತರ ಅಧಿಕಾರಿಗಳಾಗಿ ಉಪನ್ಯಾಸಕರಾದ ಸೌಮ್ಯ, ಗಾಯತ್ರಿ, ವಿಜಯ, ದಿವ್ಯಾ, ಆಫ್ರಝ್, ಅಶ್ವಿತಾ, ಸಾಜಿದ, ನಿಶಾ ಅವರು ಕಾರ್ಯನಿರ್ವಹಿಸಿದರು.
- Advertisement -

Related news

error: Content is protected !!