Thursday, August 6, 2026
spot_imgspot_img
spot_imgspot_img

ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ..!

- Advertisement -
- Advertisement -

ಮಹಾರಾಷ್ಟ್ರದ ಭಾಂದರದ ಮಸಲ್​ನಲ್ಲಿ ಗಂಡ ತನ್ನ ಮೊಬೈಲ್​ ಅನ್ನು ವಾಪಾಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ಗಂಡನ ತುಟಿಯನ್ನೇ ಕತ್ತರಿಸಿದ್ದಾಳೆ!

ಅಚ್ಚರಿಯಾದರೂ ಇದು ಸತ್ಯ. ಮಸಲ್​ನಲ್ಲಿ 40 ವರ್ಷದ ಖೇಮ್​ರಾಜ್ ಬಾಬೂರಾವ್ ಮುಲ್ ಎಂಬ ವ್ಯಕ್ತಿ ಭಾಂದರದಲ್ಲಿ ವಾಸವಾಗಿದ್ದರು. ತನ್ನ ಮೊಬೈಲ್ ಹಾಳಾಗಿದ್ದರಿಂದ ಮನೆಯಲ್ಲಿದ್ದಾಗ ಅವರು ಹೆಂಡತಿಯ ಮೊಬೈಲ್ ಅನ್ನು ಬಳಸುತ್ತಿದ್ದರು. ತನ್ನ ಮೊಬೈಲನ್ನು ಯಾವಾಗಲೂ ಗಂಡನೇ ಹಿಡಿದುಕೊಂಡಿರುತ್ತಾನೆ ಎಂದು ಕೋಪಗೊಂಡ ಹೆಂಡತಿ ಆತನೊಂದಿಗೆ ಅದೇ ವಿಷಯಕ್ಕೆ ಜಗಳ ಮಾಡಿದರು.

ಕಳೆದ ಗುರುವಾರ ಮೊಬೈಲ್ ವಿಷಯಕ್ಕೆ ಗಂಡನೊಂದಿಗೆ ಜಗಳವಾಡಿದ ಹೆಂಡತಿ ಮೊಬೈಲ್ ವಾಪಾಸ್ ಕೊಡುವಂತೆ ಕೇಳಿದಳು. ಅದಕ್ಕೆ ಗಂಡ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆಕೆ ಗಂಡನ ತುಟಿಯನ್ನು ಚಾಕುವಿ​ನಿಂದ ಕತ್ತರಿಸಿದ್ದಾಳೆ. ಚಾಕುವನ್ನು ಗಂಡನ ಮುಖದ ಮೇಲೆ ಎಸೆದಾಗ ಆ ಚಾಕು ಆತನ ತುಟಿಗೆ ತಾಗಿ ತುಟಿ ಕತ್ತರಿಸಿಹೋಗಿದೆ.

ಬಳಿಕ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ಮೇಲೆ ಹಲ್ಲೆ ಮಾಡಿದ ಹೆಂಡತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

driving
- Advertisement -

Related news

error: Content is protected !!