- Advertisement -



- Advertisement -
ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಶರಣಂ ನಾಸಿಕ್ ಬ್ಯಾಂಡ್ ವತಿಯಿಂದ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು.
ಬಂಟ್ವಾಳ ತಾಲೂಕಿನ ಮಡವು ನಿವಾಸಿ ಯಾದವ್‌ರವರಿಗೆ ರಸ್ತೆ ಅಪಘಾತದಲ್ಲಿ ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ 7ಲಕ್ಷ ರೂ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರ ಚಿಕಿತ್ಸೆಗೆ ನೆರವಾಗಲು ಶರಣಂ ನಾಸಿಕ್ ಬ್ಯಾಂಡ್ ಕುದ್ದುಪದವು ಸದಸ್ಯರು ಹಣವನ್ನು ಸಂಗ್ರಹಿಸಿ ಯಾದವರವರಿಗೆ ಹಸ್ತಾಂತರಿಸಿದರು.
- Advertisement -