- Advertisement -
- Advertisement -
ಬೆಂಗಳೂರು: ವಾಹನ ಸವಾರರಿಂದ ಹಣ ವಸೂಲಿ ಕುರಿತು ದೂರು ಹಿನ್ನೆಲೆ ರಾಜ್ಯದ ಹಲವೆಡೆ RTO ಚೆಕ್ ಪೋಸ್ಟ್ಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಬೆಂಗಳೂರು ಹೊರವಲಯದಲ್ಲಿನ ಅತ್ತಿಬೆಲೆ, ಬೀದರ್ ಜಿಲ್ಲೆಯ ಹುಮ್ನಾಬಾದ್, ಬಳ್ಳಾರಿಯ ಹಗರಿ RTO ಚೆಕ್ ಪೋಸ್ಟ್ ಮೇಲೂ ದಾಳಿ ಮಾಡಲಾಗಿದೆ.

ಬೀದರ್, ಕಲ್ಬುರ್ಗಿ ಎಸ್ಪಿ ಪಿ.ಕರ್ನೂಲ್ ನೇತೃತ್ವದ ತಂಡದಿಂದ ಬೆಳಗ್ಗೆ ನಾಲ್ಕು ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಚೇಕ್ ಪೋಸ್ಟ್ನಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಪತ್ತೆಯಾದ ಹಣ ದಂಡ ಹಾಕಿದ್ದೋ ಅಥವಾ ಲಂಚದ ಹಣವೋ ಎಂದು ಅಧಿಕಾರಿಗಳು ಪರೀಲನೆಗೆ ತೊಡಗಿದ್ದಾರೆ. ಆರ್ಟಿಓ ಅಧಿಕಾರಿ ಹೇಮಂತ ಎನ್ನುವವರ ಬಳಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -








