Thursday, November 26, 2026
spot_imgspot_img
spot_imgspot_img

ಕಡಬ: ಜಾಗದ ವಿಚಾರದಲ್ಲಿ ತಕರಾರು – ಮಹಿಳೆ ಮೇಲೆ ಹಲ್ಲೆ, 8 ಮಂದಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಡಬ: ಜಾಗದ ವಿಚಾರದಲ್ಲಿ ತಕರಾರು ತೆಗೆದು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ಐತ್ತೂರು ನಿವಾಸಿ ನೀಲಮ್ಮ(46) ಎಂಬವರು ನೀಡಿದ ದೂರಿನಂತೆ, ಪತಿ ಮೃತಪಟ್ಟ ಬಳಿಕ ಮಗಳೊಂದಿಗೆ ವಾಸಿಸುತ್ತಿರುವ ನೀಲಮ್ಮ ಅವರ ಮನೆಗೆ ನ.25ರಂದು ಮಧ್ಯಾಹ್ನ ದಿನಕರ ಯಾನೆ ವಿನೋದ, ಚೈತ್ರಾ ಹಾಗೂ ಇತರ 6 ಜನರು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಜಾಗದ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ತೆರಳಿದ್ದಾರೆ ಎಂದು ಆರೋಪಿಸಿದ್ದು, ಹಲ್ಲೆಯಿಂದ ಗಾಯಗೊಂಡ ನೀಲಮ್ಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2026, ಕಲಂ: 329(4), 118(1), 352, 351(2) r/w 3(5) – BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!