Sunday, August 30, 2026
spot_imgspot_img
spot_imgspot_img

ರೀಲ್ಸ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಸಾವು

- Advertisement -
- Advertisement -

ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗಂಗಾನಹಳ್ಳಿ ಬಳಿ ನಡೆದಿದೆ.

ಅಮೃತ(22)ಸಾವಿಗೀಡಾದ ಯುವತಿ. ಎಂಎ ಪದವೀಧರೆ ಆಗಿರುವ ಈಕೆ ಚಿಕ್ಕಬಳ್ಳಾಪುರದ ಜಂಬಿಗೆಮರದ ಹಳ್ಳಿಯ ನೆಂಟರ ಮನೆ ಗೃಹಪ್ರವೇಶಕ್ಕಾಗಿ ಬಂದಿದ್ದಳು. ಅಲ್ಲಿ ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಮತ್ತೊಬ್ಬಳು ಯುವತಿ ಜೊತೆ ಅಲ್ಲಿಗೆ ತೆರಳಿದ್ದಾಳೆ. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವಿಡಿಯೋ ಮಾಡಲು ಹೇಳಿ ಮೊಬೈಲ್‌ಫೋನ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾಳೆ.

ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೆರೆಯ ನೀರಲ್ಲಿ ಅಮೃತ ಉರುಳಿದ ಘಟನೆಯನ್ನು ಗೆಳತಿ ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು, ಅವರು ಆಕೆಯನ್ನು ಮೇಲಕ್ಕೆತ್ತುವ ವೇಳೆ ಆಕೆ ಸಾವನ್ನಪ್ಪಿದ್ದಳು ಎನ್ನಲಾಗಿದೆ.

- Advertisement -

Related news

error: Content is protected !!