

ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ತೀರಾ ಬಡತನದ ಕುಟುಂಬದ ಮುಚ್ಚಿರಪದವಿನ ಚಂದ್ರಾವತಿ ನಾರಾಯಣ ಪೂಜಾರಿಯವರಿಗೆ ಮನೆಯನ್ನು ಹಸ್ತಾಂತರಿಸಿದರು.


ಮುಚ್ಚಿರಪದವಿನ ಚಂದ್ರಾವತಿ ನಾರಾಯಣ ಪೂಜಾರಿಯವರ ತುಂಬಾ ಹಳೆಯದಾದ ವಾಸಕ್ಕೆ ಯೋಗ್ಯವಲ್ಲದ, ಮನೆಯ ಮಹಡಿ ಕುಸಿಯುವ ಹಂತದಲ್ಲಿದ ಮನೆಯನ್ನು ಸಂಘಟನೆ ವತಿಯಿಂದ ಕಳೆದ ಒಂದು ವಾರದಿಂದ ಮನೆಯ ನೂತನ ಮೇಲ್ಚಾವಣಿ ಹಾಗೂ ಇನ್ನಿತರ ಕೆಲಸಗಳನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಿ ದಿನಾಂಕ 12-12-2021 ನೇ ಆದಿತ್ಯವಾರದಂದು ಮನೆಯನ್ನು ಅವರಿಗೆ ಭಾರತಾಂಬೆಯ ಫೋಟೋ ಕೊಡುವುದರ ಮೂಲಕ ಹಸ್ತಾಂತರಿಸಿದರು.

ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ, ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಶೇಖರ ಪೂಜಾರಿ, ಬಜರಂಗದಳ ಸಂಚಾಲಕ ಮೋಕ್ಷಿತ್ ಪೆರುವಾಯಿ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಡಲ ಕಾರ್ಯವಾಹ ಜ್ಞಾನಪ್ರಕಾಶ್ ಆಚಾರ್ಯ , ಪ್ರಮುಖರಾದ ನಾಗೇಶ್ ಮಾಸ್ತರ್ ಕೊಲ್ಲತ್ತಡ್ಕ, ಯತೀಶ್ ಪೆರುವಾಯಿ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಪೆರುವಾಯಿ ಇದರ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.

