
ವಿಟ್ಲ: “ಕಲಾ ತಪಸ್ವಿ ಸಾಂಸ್ಕೃತಿಕ ತಂಡ’ ಆಯೋಜಿಸಲ್ಪಟ್ಟ, ಅದೆಷ್ಟೋ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ ಮಾಡಿಕೊಟ್ಟ “ಕಲಾಯಶ್ವಸಿ’ ನಾಮಾಂಕಿತ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಕಂಬಳಬೆಟ್ಟು ಧರ್ಮನಗರದ ಸಮಾಜ ಮಂದಿರದಲ್ಲಿ 23/10/2022ನೇ ಆದಿತ್ಯವಾರದಂದು ನಡೆಯಿತು.

ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಶಿವಪ್ರಕಾಶ್ ಕೆ.ವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಬಿಕಾ ಪದವಿಪೂರ್ವ ಕಾಲೇಜು ಪುತ್ತೂರು ಇಲ್ಲಿನ ಭೌತಶಾಸ್ತ್ರ ಉಪನ್ಯಾಸಕ ಸುಬ್ರಮಣ್ಯ ಕೆ., ಸಾನ್ವಿ ಕನ್ಸಕ್ಷನ್ ವಿಟ್ಲ ಇದರ ಮಾಲಕ ತಾರಾನಾಥ್ ಬೋಳಿಗದ್ದೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡ್ಕಿದು ಇದರ ಮಂಡಲ ಕಾರ್ಯವಾಹ ರಾಜೇಶ್ ಕೋಡಿಜಾಲು, ಸಿದ್ಧಿವಿನಾಯಕ ಯುವಕ ಮಂಡಲ, ಧರ್ಮನಗರ ಇದರ ಕಾರ್ತಿಕ್ ಶೆಟ್ಟಿ ಮುಡೈಮಾರು, ವಿಟಿವಿ ಮಾಧ್ಯಮ ಸಂಸ್ಥೆಯ ನಿರ್ದೇಶಕ ರಾಮದಾಸ್ ಶೆಟ್ಟಿ ಪಾತ್ರತೋಟ, ಪ್ರಶಾಂತ್ ಸೌಂಡ್ಸ್ ಆಂಡ್ ಲೈಟಿಂಗ್ಸ್ ಇದರ ಮಾಲಕ ಪ್ರಶಾಂತ್ ಶೆಟ್ಟಿ ಕುಂಡಡ್ಕ, ಕಲಾಯಶ್ವಸಿ ಸ್ಪರ್ಧೆಯ ಅಧ್ಯಕ್ಷರಾದ ಅಕ್ಷತಾ ನಡುವಡ್ಕ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿ, ಕಲಾ ತಪಸ್ವಿ ತಂಡಕ್ಕೆ ಶುಭಕಾರೈಸಿರು. ಇಂತಹ ಕಾರ್ಯಕ್ರಮಗಳು ಮುಂದೆಯು ನಡೆಯತ್ತಿರಲಿ ಎಂದು ಅತಿಥಿಗಳು ಅಭಿಪ್ರಾಯಪಟ್ಟರು. ಕಲಾ ತಪಸ್ವಿ ತಂಡದ ನಿರ್ದೇಶಕ ಜೈದೀಪ್ ಅಮೈ ಅತಿಥಿಗಳನ್ನು ಸ್ವಾಗತಿಸಿ, ಅಕ್ಷಯ್ ವಂದಿಸಿದರು, ಹರ್ಷಿತಾ ಎಸ್ ಕಾರ್ಯಕ್ರಮ ನಿರೂಪಿಸಿದರು.









