Thursday, July 23, 2026
spot_imgspot_img
spot_imgspot_img

ವಿಟ್ಲ ಕುಂಡಡ್ಕ ಬಾಕಿಮಾರು ತರವಾಡು ಮನೆಯಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವ

- Advertisement -
- Advertisement -

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಬಾಕಿಮಾರು ತರವಾಡು ಮನೆತನದಲ್ಲಿ ಇದೇ ಬರುವ ದಿ: 29.04.2022ನೇ ಶುಕ್ರವಾರದಿಂದ 30.04.2022ನೇ ಶನಿವಾರದವರೆಗೆ “ಪ್ರತಿಷ್ಠಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವ” ಹಾಗೂ “ತಂಬಿಲ ಸೇವೆಯು ಜರಗಲಿದೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ ಗಂಟೆ 7.00 ಗಣಹೋಮ, ಬೆಳಗ್ಗೆ ಗಂಟೆ 9.00 ವೆಂಕಟರಮಣ ದೇವರ ಮುಡಿಪು ಪೂಜೆ, ಬೆಳಗ್ಗೆ ಗಂಟೆ 10.00 ಶ್ರೀ ನಾಗದೇವರಿಗೆ ತಂಬಿಲ ಸೇವೆ, ಬೆಳಗ್ಗೆ ಗಂಟೆ 11.00 ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00 ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 1.00 ದೈವಗಳ ಭಂಡಾರ ಇಳಿಯುವುದು, ಸಂಜೆ ಗಂಟೆ 6.00 ಸ್ಥಳದ ಚಾಮುಂಡಿ, ಪಂಜುರ್ಲಿ, ಗುಳಿಗ ಕಲ್ಲುರ್ಟಿ ನೇಮೋತ್ಸವ, ರಾತ್ರಿ ಗಂಟೆ 8.00 ಅನ್ನಸಂತರ್ಪಣೆ, ರಾತ್ರಿ ಗಂಟೆ 9.00 ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕುಂಟಿಲ್ಲತ್ತಾಯ, ರಾಹುಗುಳಿಗ ದೈವದ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!