- Advertisement -
- Advertisement -

ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕೊಳ್ನಾಡು ಗ್ರಾಮದ ಸೆರ್ಕಳದಲ್ಲಿ ನಡೆದಿತ್ತು.
ನಾಪತ್ತೆಯಾದ ವಿದ್ಯಾರ್ಥಿನಿ ಅಕ್ಷತಾಳ ಚಿಕ್ಕಮ್ಮ ವಿಟ್ಲ ಠಾಣೆ ಗೆ ನೀಡಿದ ದೂರಿನನ್ವಯ ವಿಟ್ಲ ಪೋಲೀಸರ ತಂಡ ವಿದ್ಯಾರ್ಥಿಯನ್ನು ಕಡಬ ಪರಿಸರದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಮನೆಯವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ

ಅಕ್ಷತಾ ಮೂಲತ ಕಡಬ ನಿವಾಸಿಯಾಗಿದ್ದು ವಿದ್ಯಾಭ್ಯಾಸಕ್ಕಾಗಿ ತನ್ನ ಚಿಕ್ಕಮನ ಮನೆಯಲ್ಲಿ ವಾಸವಾಗಿದ್ದಳು.
ಮಾನಸಿಕವಾಗಿ ನೊಂದ ಈ ವಿದ್ಯಾರ್ಥಿನಿ ಎಂದಿನಂತೆ ಕಾಲೇಜಿಗೆ ಹೋಗುವುದೆಂದು ಹೇಳಿ ಕಡಬದ ತನ್ನ ಸಂಬಂಧಿಕರ ಮನೆಗೆ ಹೋಗಿ ತಂಗಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ.

ನಾಪತ್ತೆ ಪ್ರಕರಣ ಬಗ್ಗೆ ತನಿಖೆ ಮುಂದುವರೆಸಿದ ವಿಟ್ಲ ಪೊಲೀಸರು ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ಹೆತ್ತವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಟ್ಲ ಪೋಲೀಸರ ಈ ಕಾರ್ಯವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

- Advertisement -








