- Advertisement -




- Advertisement -
ಕರ್ನಾಟಕ ವಿಧಾನ ಸಭಾ ಚುನಾವಣೆ ಅಂಗವಾಗಿ ಪಶ್ಚಿಮ ವಲಯ ಹಾಗೂ ಮಂಗಳೂರು ನಗರ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಪಿಎಸ್‌ಐಗಳ ವರ್ಗಾವಣೆಗೆ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ ಚಂದ್ರಗುಪ್ತಾ ಅವರು ಆದೇಶ ಹೊರಡಿಸಿದ್ದಾರೆ.
ಇದರನ್ವಯ ವಿಟ್ಲ ಪೊಲೀಸ್ ಠಾಣೆಯ ಪಿಎಸ್‌ಐ ರುಕ್ಮ ನಾಯ್ಕ್ ಅವರು ಮಣಿಪಾಲ ಪೊಲೀಸ್ ಠಾಣೆಗೆ ವರ್ಗಾವಣೆಯಾಗಲಿದ್ದಾರೆ.

ವಿಟ್ಲ ಪೊಲೀಸ್ ಠಾಣೆಗೆ ಕುಮಟಾ ಠಾಣೆಯ ಸಂಚಾರ ವಿಭಾಗದ ಪಿಎಸ್‌ಐ ಪದ್ಮ ದೇವಳಿ ಅವರು ವರ್ಗಾವಣೆ ಆಗಲಿದ್ದಾರೆ.
ವಿಟ್ಲ ಪೊಲೀಸ್ ಠಾಣೆ ಈಗಾಗಲೇ ಮೇಲ್ದರ್ಜೆಗೆ ಏರಿದೆ. ಮೊದಲೇ ಕೇರಳ ಗಡಿ ಭಾಗವಾದ ಈ ಪ್ರದೇಶದಲ್ಲಿ ಖಾಕಿ ಪಡೆ ಕಣ್ಗಾವಲು ಇಟ್ಟಿದೆ. ಇನ್ನು ವಿಧಾನ ಸಭಾ ಚುನಾವಣೆ ಹಿನ್ನಲೆ ವಿವಿಧ ಠಾಣೆಗಳಿಗೆ ಪಿಎಸ್‌ಐಗಳ ವರ್ಗಾವಣೆಗೆ ಆದೇಶ ನೀಡಲಾಗಿದೆ.

- Advertisement -