ಪತ್ನಿ ಆಶಾ ಮತ್ತು ಗೆಳೆಯ ಯೋಗೀಶ್ ಸೇರಿಕೊಂಡು ಭಾಸ್ಕರನ ಕತ್ತು ಹಿಸುಕಿ ಮರ್ಡರ್ !!!
ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯ ಕುಮೇರು ಎಂಬಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆಗೈದ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಇದೊಂದು ವ್ಯವಸ್ಥಿತ ಕೊಲೆ ಎಂಬ ಆರೋಪ ಕೇಳಿಬಂದಿದೆ. ಅರವಿಂದ ಭಾಸ್ಕರ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದೊಂದು ಕೊಲೆ ಎಂಬುವುದಾಗಿ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಹೆಂಡತಿ ಆಶಾ. ಆಶಾಳ ಪ್ರಿಯಕರ ಯೋಗೀಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆಕೆಲಸಕ್ಕೆಂದು ಬಂದವ ಸಲುಗೆ ಗಿಟ್ಟಿಸಿಕೊಂಡ..!
ಅರವಿಂದ ಭಾಸ್ಕರ ರವರು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಆ ಮನೆಯ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ಎಂಬಾತನು ಮಾಡಿಸುತ್ತಿದ್ದ. ಈ ಮೂಲಕ ಭಾಸ್ಕರ ಅವರ ಪತಿಗೆ ಪರಿಚಯವಾದ ಯೋಗೀಶ್ ಗೌಡ ಆಶಾಳೊಂದಿಗೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದಾನೆ. ಅರವಿಂದ ಭಾಸ್ಕರನು ಅವರ ಅಡಿಕೆ ತೋಟದ ಅಡಿಕೆಯನ್ನು ತೆಗದುಕೊಂಡು ಹೋಗಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಶಾಳು ಆಕ್ಷೇಪಿಸುತ್ತಿರುವುದಲ್ಲದೇ ಕೆಲವೊಂದು ಬಾರಿ ಯೋಗೀಶನು ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದನು.
ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಆತನ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿದ್ದನು. ಬಗ್ಗೆ ಸುಮಾರು 1 ತಿಂಗಳ ಹಿಂದೆಯೇ ದೂರುದಾರರಿಗೆ ತಿಳಿಸಿರುತ್ತಾರೆ.
ಆಶಾ ಹೈಡ್ರಾಮ:
26.02.2023 ರಂದು ಬೆಳಿಗ್ಗೆ ಸುಮಾರು 8.00 ಗಂಟೆ ಸಮಯಕ್ಕೆ ಆಶಾ ಕರೆ ಮಾಡಿ ಭಾಸ್ಕರ ಮಲಗಿದ್ದಲ್ಲಿಂದ ಏಳುತ್ತಿಲ್ಲ. ನೀವು ಮನೆಗೆ ಬನ್ನಿ ಎಂಬುದಾಗಿ ಹೇಳಿದ್ದಾಳೆ. ವಿಚಾರವನ್ನು ತಿಳಿಸಿದ ಬಳಿಕ ಅಂಬ್ಯುಲೆನ್ಸ್ ವಾಹನದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈಧ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ಮೃತದೇಹದ ಸ್ಥಿತಿಗತಿಯನ್ನು ನೋಡಿದಾಗ ಮೃತ ಅರವಿಂದ ಭಾಸ್ಕರನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ.
ಯೋಗೀಶ ಗೌಡ ಹಾಗೂ ಅರವಿಂದ ಭಾಸ್ಕರನ ಪತ್ನಿ ಆಶಾರವರು ಒಟ್ಟು ಸೇರಿಕೊಂಡು ಕೊಲೆ ಮಾಡುವ ಸಮಾನ ಉದ್ದೇಶ ದಿಂದ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಅವರುಗಳ ವಿರುದ್ದ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.