- Advertisement -





- Advertisement -
ವಿಟ್ಲ: ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲದಿಂದ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಯ ಸಲುವಾಗಿ ಕಲಾತಪಸ್ವಿ ಸಾಂಸ್ಕೃತಿಕ ತಂಡ ಸೇವಾನಿಧಿ ಅಭಿಯಾನವನ್ನು ಪ್ರಾರಂಭಿಸಿತ್ತು. Phonepay, ಕುಂಡಡ್ಕದಲ್ಲಿ ನಡೆದ ಕಬ್ಬಡ್ಡಿ, ವಿಟ್ಲ ಜಾತ್ರೆಯ ಸಮಯ ಸಹಾಯನಿಧಿ ಯಾಚನೆ ಹಾಗೂ ಭಾಷಣ ಸ್ಪರ್ಧೆಯ ಆಯೋಜನೆ ಮಾಡಿ ಅದರಿಂದ ಎಲ್ಲಾರಿಗೂ ವಿಷಯ ತಿಳಿಯುವಂತೆ ಮಾಡಿ ಧನ ಸಂಗ್ರಹ ಮಾಡಲು ತಂಡ ಮುಂದಾಗಿತ್ತು.

ಈ ರೀತಿಯಾಗಿ ಒಟ್ಟು 76,664₹ ಮೊತ್ತ ಸಂಗ್ರಹವಾಗಿತ್ತು. ಈ ಮೊತ್ತವನ್ನು ಫಲಾನುಭವಿಗಳಿಗೆ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಹಸ್ತಾಂತರ ಮಾಡಿಸಲಾಯಿತು. ಈ ಸಂದರ್ಭದಲ್ಲಿ ತಂಡದ ನಿರ್ದೇಶಕ ಜೈದೀಪ್ ಅಮೈ, ರಮೇಶ್ ಧರ್ಮನಗರ, ಅಕ್ಷಯ್ ಅರ್ಕೆಚ್ಚಾರು, ಹರ್ಷಿತ. ಎಸ್ ಉಪಸ್ಥಿತರಿದ್ದರು.
- Advertisement -