Thursday, July 30, 2026
spot_imgspot_img
spot_imgspot_img

ವಿಟ್ಲ: ಮಾಡ ಮೆಚ್ಚಿ ಜಾತ್ರೆಯ ವೇಳೆ ಮಳೆ; ಜಿಟಿಜಿಟಿ ಮಳೆಯಲ್ಲೂ ಉರಿಯುತ್ತಿರುವ ದೀಪ – ಕಾರ್ಣಿಕ ಮೆರೆದ ಶಕ್ತಿ

- Advertisement -
- Advertisement -

ವಿಟ್ಲ: ಹಲವು ದಿನಗಳಿಂದ ಕರ್ನಾಟಕ ಸೇರಿದಂತೆ ವಿವಿಧೆಡೆ ಮಳೆ ಸುರಿಯುತ್ತಿದೆ. ಅಶ್ವಿನಿ ಮಳೆಗೆ ಇಳೆ ತಂಪಾಗಿದೆ. ಒಕ್ಕೆತ್ತೂರು ಮಾಡ ಶ್ರೀ ಮಲರಾಯಿ ದೈವಸ್ಥಾನದಲ್ಲಿ ಕಲಾವಧಿ ಉತ್ಸವ ನಡೆಯುಯತ್ತಿದ್ದು ನಿನ್ನೆ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆದಿದೆ.

ಈ ವೇಳೆ ಮಳೆ ಬಂದಿದೆ. ಮಳೆ ಬರುವಾಗ ದೀಪಗಳು, ಬೆಂಕಿ ನಂದಿ ಹೋಗುವುದು ಸಾಮಾನ್ಯ. ಆದರೆ ದೈವದ ಮುಂದಿದ್ದ ದೀಪ ಜಿಟಿಜಿಟಿ ಮಳೆಯಲ್ಲೂ ಉರಿಯುತ್ತಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಕಾರ್ಣಿಕ ದೈವಗಳ ಶಕ್ತಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

Related news

error: Content is protected !!