
ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮ ಸಾಲೆತ್ತೂರಿನ ಹಝಿಜ್ ಎಂಬವರ ಮಗಳ ಮದುವೆ ಸಮಾರಂಭದಲ್ಲಿ ವಧುವಿನ ಮನೆಗೆ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿಯಾದ ವರ ಉಮರುಳ್ಳ ಬಾಷಿತ್ ಎಂಬಾತ ಹಿಂದೂ ಸಮುದಾಯದವರು ಆರಾಧಿಸುವ ಕೊರಗಜ್ಜ ದೈವದ ವೇಷ ಧರಿಸಿ ಮತ್ತು ಆತನ ಸಂಗಡಿಗರು ಅಸಭ್ಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದುಷ್ಕತ್ಯ ಮೆರೆದಿದ್ದು ಇದರಿಂದ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾದ ಬಗ್ಗೆ ಖಂಡಿಸಿ ಆರೋಪಿಗಳನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು, ಈ ಬಗ್ಗೆ ಜ.07 ರಂದು ಠಾಣಾ ಅಕ್ರ 04/2022 ಕಲಂ 153(ಎ) , 295(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖೆ ಮುಂದುವರೆಸಿ ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಸಿ ಜ.10 ರಂದು ಕೇರಳದ ಅಹಮ್ಮದ್ ಮುಜಿತಬ ಯಾನೆ ಮುಜಿ ಮತ್ತು ಮೊಹಿಯುದ್ದಿನ್ ಮುನೀಸ್ ಎಂಬವರನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬಳಿಕ ಪ್ರಕರಣದ ಪ್ರಮುಖ ಆರೋಪಿ ಉಮರುಲ್ ಬಾಸಿತ್ ನ ಬಗ್ಗೆ ಮಾಹಿತಿ ಸಂಗ್ರಹಿಸಿ ನಿನ್ನೆ ಕೇರಳ ರಾಜ್ಯದ ಎರ್ನಾಕುಲಂ ಎಂಬಲ್ಲಿಂದ ಹೊರ ದೇಶಕ್ಕೆ ಪಲಾಯಣ ಮಾಡಿ ತಲೆಮರೆಸಿಕೊಳ್ಳುವ ಬಗ್ಗೆ ತಿಳಿದುಕೊಂಡು ಕೇರಳ ರಾಜ್ಯದ ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನೆಡುಂಬಸೆರಿ ಎರ್ನಾಕುಲಂ ಜಿಲ್ಲೆ ಬಳಿ ದಸ್ತಗಿರಿ ಮಾಡಿದ್ದು ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಋಷಿಕೇಶ್ ಸೋನವಣೆ ಐಪಿಎಸ್ SP ದ.ಕ ಜಿಲ್ಲೆ ಮತ್ತು ಪ್ರತಾಪ್ ಸಿಂಗ್ ಥೊರಟ್ ಡಿವೈಎಸ್ ಪಿ ಬಂಟ್ವಾಳ ಉಪವಿಭಾಗರವರ ಮಾರ್ಗದರ್ಶನದಲ್ಲ, ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್ ಇ ನೇತೃತ್ವದಲ್ಲಿ , ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾಮಸು), ಸಂಜೀವ ಪುರುಷ ಪಿಎಸ್ ಐ (ತನಿಖೆ-1), ಹೆಚ್ ಸಿ 1957 ಜಯಕುಮಾರ್, ಹೆಚ್ ಸಿ 1003 ದಿನೇಶ್, ಹೆಚ್ ಸಿ 1049 ರಕ್ಷಿತ್, ಹೆಚ್ ಸಿ 496 ಪ್ರಸನ್ನ ಕುಮಾರ್, ಪಿಸಿ 2487 ಹೇಮರಾಜ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.










