- Advertisement -
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕುಂಡಡ್ಕ ಶಾಖೆ ಇದರ ವತಿಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಸಂಜೀವ ಮಠಂದೂರು ಅವರಿಗೆ ಕುಳ ಮತ್ತು ವಿಟ್ಲಮುಡ್ನೂರು ಗ್ರಾಮದಲ್ಲಿ ಗೋಕಳ್ಳತನ ನಡೆಯುತ್ತಿದ್ದು ಹಾಗೂ ವಯಸ್ಸಾದ ಮತ್ತು ಸಾಕಲು ಸಾಧ್ಯವಾಗದ ಗೋವುಗಳನ್ನು ಮುಸ್ಲಿಮರಿಗೆ ಮಾರಾಟ ಮಾಡುತ್ತಿದ್ದಾರೆ.

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದಲ್ಲಿ ಸರಕಾರದ ವತಿಯಿಂದ ಗೋಶಾಲೆ ನಿರ್ಮಿಸಿ ಈ ಗೋ ಶಾಲೆಗೆ ಉಚಿತವಾಗಿ ಗೋವುಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಶಾಸಕರಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಪುಣಚ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪಂಚಾಯತ್ ಸದಸ್ಯರಾದ ಉಮೇಶ್ ಅರ್ಕಲ್ತೋಟ, ಪುನೀತ್ ಮಾಡತ್ತಾರ್, ಆನಂದ ಮಾನಜೆಮೂಲೆ, ವನೀತ್ ಅಭಿರಿ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದರು.



- Advertisement -








