Tuesday, July 28, 2026
spot_imgspot_img
spot_imgspot_img

ವಿಟ್ಲ: ಶಾಸಕ ಸಂಜೀವ ಮಠಂದೂರು ಸಮ್ಮುಖದಲ್ಲಿ ಬಿಜೆಪಿ ಸ್ಥಳೀಯ ಆಡಳಿತ ಚುನಾವಣಾ ಪ್ರಣಾಳಿಕೆ

- Advertisement -
- Advertisement -
vtv vitla
vtv vitla

ವಿಟ್ಲ: ಆಡಳಿತ ಸರಕಾರ ಹೇಗೆ ಇರಬೇಕು ಎಂದು ಮತದಾನ ಮಾಡುವ ಪ್ರಜೆಗಳು ನಿರ್ಧಾರ ಮಾಡಬೇಕು. ಹೀಗಾಗಿ ಯಾವುದೇ ಚುನಾಚಣೆಯ ಮೊದಲು ಪ್ರಣಾಳಿಕೆ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಬೊಬ್ಬೆಕೇರಿ ಗಜಾನನ ಸಭಾಂಗಣದಲ್ಲಿ ನಡೆದ ವಿಟ್ಲ ಬಿಜೆಪಿ ಸ್ಥಳೀಯ ಆಡಳಿತ ಚುನಾವಣೆ ಪ್ರಣಾಳಿಕೆ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯ ಆಡಳಿತ ಚುನಾವಣೆಗಳು ಬಂದಾಗಲೂ ಸ್ಥಳೀಯ ಆಡಳಿತವಾಗಿರುವ ಸಮಸ್ಯೆಗಳು, ಮೂಲಭೂತ ಸೌಲಭ್ಯಗಳು, ಕಾನೂನಿನ ತೊಡಕುಗಳನ್ನು ತಿಳಿದುಕೊಂಡು ಯಾವ ರೀತಿಯಾಗಿ ಅಭಿವೃಧಿ ಕಾರ್ಯಗಳನ್ನು ಮಾಡಬಹುದು ಎಂದು ಪ್ರಣಾಳಿಕೆ ತಯಾರು ಮಾಡಬೇಕು ಎಂದು ಅವರು ತಿಳಿಸಿದರು.

ಈ ವೇಳೆ ಊರಿನ ಪ್ರಮುಖರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು ವಿಟ್ಲ ಪಟ್ಟಣ ಪಂಚಾಯತ್ ಯಾವ ರೀತಿಯಾಗಿ ಅಭಿವೃಧಿ ಕಾರ್ಯಗಳನ್ನು ಮಾಡಬಹುದು ಎಂದು ಅಭಿಪ್ರಾಯಗಳನ್ನು ತಿಳಿಸಿದರು. ಸ್ಥಳೀಯರ ಬೇಡಿಕೆಗಳನ್ನು ಕೇಳಿ ವಿಟ್ಲದ ಅಭಿವೃದ್ಧಿ ಕಾರ್ಯಗಳನ್ನು ಈಡೇರಿಸುವಂತೆ ಶಾಸಕರು ಭರವಸೆ ನೀಡಿದರು. ಈ ವೇಳೆ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಸಾಜಾ ರಾಧಕೃಷ್ಣ ಆಳ್ವ, ಬಿಜೆಪಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!