




ಕಡಂಬು: ವಿಟ್ಲ ಪಡ್ನೂರು ಗ್ರಾಮದ ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರದ ಕುರಿತು ದಿನಾಂಕ:16-11-2025 ಭಾನುವಾರ ಸಂಜೆ ಗಂಟೆ 5 ಕ್ಕೆ ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೃಷ್ಣಯ್ಯ ಕೆ ಅರಮನೆ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ದಿನಾಂಕ:29-11-2025ರಂದು ನಡೆಯುವ ವಿಷ್ಣುಯಾಗ ಹಾಗೂ ಜೀರ್ಣೋದ್ಧಾರ ಸಮಿತಿ ರಚನೆ ಈ ಕುರಿತು ಪ್ರಚಾರ ಸಮಿತಿಯನ್ನು ರಚಿಸಿ ಗ್ರಾಮಸ್ಥರಿಗೆ ಹಾಗೂ ಊರ ಪ್ರಮುಖರಿಗೆ ಆಮಂತ್ರಣವನ್ನು ಮುಟ್ಟಿಸುವ ಜವಾಬ್ದಾರಿಯನ್ನು ನೀಡಲಾಯಿತು. ಈ ಪ್ರಕಾರ ದಿನಾಂಕ:19-11-2025ರಂದು ಸಂಜೆ ಗಂಟೆ 8 ಈ ಆಮಂತ್ರಣದ ಬಿಡುಗಡೆಯನ್ನು ನಡೆಸುವುದಾಗಿ ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರಸಾದ ಬನ್ನಿಂತಾಯರು ಮಾತನಾಡಿ ಅರಮನೆಯ ಗಣ್ಯರಿಗೆ ಹಾಗೂ ಗ್ರಾಮಸ್ಥರಿಗೆ ಸ್ವಾಗತ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕೃಷ್ಣಯ್ಯ ಕೆ ವಿಟ್ಲ ಇವರು ಮಾತನಾಡಿ ಮುಂದೆ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕೃಷ್ಣಯ್ಯ ಕೆ ವಿಟ್ಲ, ಜಯರಾಮ ಅರಮನೆ ಮತ್ತು ರವೀಶ್ ಶೆಟ್ಟಿ ಕೊಡಂಗಾಯಿ, ರಾಘವ ಗೌಡ ಬನ ಲೋಕಪ್ಪ ಗೌಡ, ಪ್ರದೀಪ್ ಗೌಡ, ಶಶಿ ಭಟ್ ಪಡಾರು, ಜಯರಾಮ ಅನಿಲಕಟ್ಟೆನ ಧರ್ನಪ್ಪ ಗೌಡ ಬನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂದೇಶ ಶೆಟ್ಟಿ ಬಿಕ್ನಾಜೆ ಧನ್ಯವಾಗೈದರು.








