- Advertisement -
- Advertisement -



ವಿಟ್ಲ: ಎರುಂಬು ದಿವ್ಯ ಜ್ಯೋತಿ ಮಿತ್ರ ತಂಡದ ಸ್ಥಾಪಕಾಧ್ಯಕ್ಷರು, ಪುಣೆಯ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಪ್ರಧಾನ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸುತ್ತಿದ್ದ ವಾಸು ಕುಲಾಲ್ ವಿಟ್ಲ ಅವರು ಅ.18ರಂದು ರಾತ್ರಿ ಪುಣೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರ ನಿಧನಕ್ಕೆ ಪುಣೆ ತುಳುಕೂಟ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಸರ್ವ ಪದಾಧಿಕಾರಿಗಳು ಶೋಕ ವ್ಯಕ್ತಪಡಿಸಿದ್ದಾರೆ. ವಾಸು ಕುಲಾಲ್ ರವರು ನಾಟಕ ಯಕ್ಷಗಾನ ಕಲಾವಿದರಾಗಿ ಸರಳ ಸನ್ನಡತೆಯ ವ್ಯಕ್ತಿತ್ವದಿಂದ ಗಮನ ಸೆಳೆದವರಾಗಿದ್ದರು.




- Advertisement -








