- Advertisement -
- Advertisement -
ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಶರತ್ ಮಡಿವಾಳರ ಬಲಿದಾನ ಸ್ಮರಣ ದಿನದ ಪ್ರಯುಕ್ತ ಸಜೀಪ ವಲಯದ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ತಮ್ಮ ಮನೆ ಮತ್ತು ವಠಾರದಲ್ಲಿ ಗಿಡ ನೆಡುವ ಮೂಲಕ ಸ್ವಯಂ ಸೇವಕ ಶರತ್ ಮಡಿವಾಳರಿಗೆ ನಮನ ಸಲ್ಲಿಸಿದರು.



ಸಜೀಪದ ಸಂಘ ಪರಿವಾರದ ಕಾರ್ಯಕರ್ತರು ಹುತಾತ್ಮ ಸ್ವಯಂಸೇವಕನ ಸ್ಮಾರಕ ಪೀಠದಲ್ಲಿ ಸೇರದೇ ತಮ್ಮ ತಮ್ಮ ಮನೆಗಳಲ್ಲೇ ಶರತ್ ಮಡಿವಾಳರನ್ನು ಮನಃಪೂರ್ವಕವಾಗಿ ನೆನೆದು ನಮಿಸಿ ಸ್ಮರಿಸುವ ಜೊತೆಗೆ ಕೊರೋನ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದರು.

ಹುತಾತ್ಮನ ಬಲಿದಾನದ ದಿನ ಗೌರವಾರ್ಥವಾಗಿ ಪರಿಸರ ಜಾಗೃತಿ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಶಿಸ್ತು ಮತ್ತು ಜವಾಬ್ದಾರಿ ತೋರಿದ ಸಜೀಪದ ಸಂಘ ಪರಿವಾರದ ಕಾರ್ಯಕರ್ತರ ಬಗ್ಗೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ.



- Advertisement -