



ಶಿವಮೊಗ್ಗ: ಭದ್ರಾವತಿ ನಗರದ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ(ಏ.21) ರಾತ್ರಿ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರ್ಯಾಗನ್ನಿಂದ ಇರಿದು ಆತನನ್ನ ಕೊಲೆ ಮಾಡಿದ್ದ ಪಾತಕಿಗಳನ್ನು ಹೊಸಮನೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸತ್ಯಸಾಯಿ ನಗರದ ಕೋಡಿಹಳ್ಳಿಯ ನವೀನ್ (28) ಹತ್ಯೆಯಾದ ವ್ಯಕ್ತಿ. ಸಾದತ್, ಸುಹೇಲ್, ಜಾವೀದ್ ಮತ್ತು ಫರ್ವೇಜ್ ಬಂಧಿತ ಆರೋಪಗಳು.
ಸಾದತ್ ಮತ್ತು ಸುಹೇಲ್ ಎಂಬುವವರಿಗೆ ಕೊಲೆಯಾದ ನವೀನ್ ಮೊಬೈಲ್ ಸೇಲ್ ಮಾಡಿದ್ದ. ಆದರೆ ಅದರ ಬಾಕಿ ಹಣ ನವೀನ್ಗೆ ಬಂದಿರಲಿಲ್ಲ. ಎರಡು ಸಾವಿರ ರೂಪಾಯಿ ಹಣ ಬಾಕಿ ಬರಬೇಕಿತ್ತು. ಅದನ್ನ ನವೀನ್ ಮತ್ತು ಅರುಣ್ ಕುಮಾರ್ ಅಲಿಯಾಸ್ ಕೊಕ್ಕು ಇಬ್ಬರು ಹಣ ಕೇಳಲು ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.
ನವೀನ್ ಬಳಿ ಒಂದು ಡ್ರ್ಯಾಗನ್ ಇತ್ತು. ನವೀನ್ ಎಲ್ಲಿ ಡ್ರ್ಯಾಗನ್ನಿಂದ ಅಟ್ಯಾಕ್ ಮಾಡುತ್ತಾನೆ ಎನ್ನುವ ಆತಂಕದಲ್ಲಿದ್ದ ಸಾದತ್ ಮತ್ತು ಸುಹೇಲ್ ಅಲರ್ಟ್ ಆಗಿ, ಮೊದಲೇ ಗಾಂಜಾ ಗುಂಗಿನಲ್ಲಿದ್ದ ಯುವಕರ ನಡುವೆ ಗಲಾಟೆ ವಿಕೋಪಕ್ಕೆ ಹೋಗಿ, ತನ್ನ ಬಳಿದ್ದ ಡ್ರ್ಯಾಗನ್ನಿಂದ ನವೀನ್ ಮೇಲೆ ಸಾದತ್ ಮತ್ತು ಸುಹೇಲ್ ದಾಳಿ ಮಾಡಿದ್ದಾರೆ. ಬಳಿಕ ನವೀನ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಭದ್ರಾವತಿಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದನು.

ಚುನಾವಣೆಯ ಬಿಸಿ ನಡುವೆ ರಂಜಾನ್ ಹಬ್ಬದ ಸಂಭ್ರಮ. ಚುನಾವಣೆಯ ಕಾವು ಸದ್ಯ ಮಲೆನಾಡಿನಲ್ಲಿ ಜಾಸ್ತಿಯಾಗಿದೆ. ಈ ನಡುವೆ ಓರ್ವ ಹಿಂದೂ ಯುವಕನ ಕೊಲೆಯ ಸುದ್ದಿಯು ನಗರದಲ್ಲಿ ಕೆಲ ಹೊತ್ತು ಆಂತಕ ಸೃಷ್ಟಿ ಮಾಡಿತ್ತು. ಮತ್ತೆ ಎಲ್ಲಿ ಕೋಮುಗಲಭೆ ನಡೆಯುತ್ತದೆ ಎಂದು ಖುದ್ದಾಗಿ ಎಸ್ಪಿ ಮಿಥುನ್ ಕುಮಾರ್ ಭದ್ರಾವತಿಗೆ ಭೇಟಿ ನೀಡಿದ್ದರು.
ಎಸ್ಪಿ ಎಲ್ಲ ಮುಂಜಾಗೃತೆಯನ್ನು ವಹಿಸಿದ್ದರು. ಭದ್ರಾವತಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಪ್ರಕರಣ ನಡೆದು ಕೆಲವೇ ಗಂಟೆಯಲ್ಲಿ ಪೊಲೀಸರು ನಾಲ್ವರು ಹಂತಕರನ್ನ ಹೆಡಿಮುರಿಕೊಟ್ಟಿದ್ದಾರೆ. ಹೌದು ಸಾದತ್, ಸುಹೇಲ್, ಜಾವೀದ್ ಮತ್ತು ಫರ್ವೇಜ್ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.