Tuesday, September 28, 2021
spot_imgspot_img
spot_imgspot_img

ಸಿಎಂ ಬೊಮ್ಮಾಯಿ ಭೇಟಿ ವೇಳೆ ಶಿವರಾಮ ಹೆಬ್ಬಾರ ಕಾರು ಅಪಘಾತ

- Advertisement -
- Advertisement -

ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮುಂಭಾಗ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಘಟನೆ ನಡೆಯುವಾಗ ಮುಖ್ಯಮಂತ್ರಿಯವರ ಕಾರಿನಲ್ಲಿದ್ದರು ಎಂದು ವರದಿಯಾಗಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶಿವರಾಮ್ ಹೆಬ್ಬಾರ್ ಇದ್ದರು. ವಿಮಾನ ನಿಲ್ದಾಣದಿಂದ ಹೊರ ತೆರಳುವಾಗ ಸಿಎಂ ಅವರಿದ್ದ ಕಾರನ್ನು ಹಿಂಬಾಲಿಸುವ ಭರದಲ್ಲಿ ಬೆಂಗಾವಲು ಪಡೆಗೆ ಕಾರು ಡಿಕ್ಕಿಯಾಗಿದೆ. ಘಟನೆ ನಡೆಯುವಾಗ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿಯವರ ಕಾರಿನಲ್ಲಿದ್ದರು. ಅಪಘಾತದ ಸಂದರ್ಭದಲ್ಲಿ ಮಾಜಿ ಸಚಿವರ ಕಾರಿನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉತ್ತರ ಕನ್ನಡ ಪ್ರವಾಹ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಅವರು ಹುಬ್ಬಳ್ಳಿಯಲ್ಲಿದ್ದು ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಯವರ ಸಮಯ ಪಾಲನೆಯ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅವರು ಬೆಳಗ್ಗೆ 11.45ಕ್ಕೆ ಅಂಕೋಲಾದಲ್ಲಿರಬೇಕಿತ್ತು, ಇನ್ನೂ ಹುಬ್ಬಳ್ಳಿಯಲ್ಲೇ ಇದ್ದಾರೆ ಎಂದು ದೂರಿದ್ದಾರೆ. ಹುಬ್ಬಳ್ಳಿಯ ಭೇಟಿ ಕಾರ್ಯಕ್ರಮ ಮುಗಿದ ನಂತರ ಅವರು ಉತ್ತರ ಕನ್ನಡಕ್ಕೆ ತೆರಳುವ ನಿರೀಕ್ಷೆ ಇದೆ.

ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ ಅವರ ಭೇಟಿಗೆ ಹೋಗಲ್ಲವೆಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕೊಡಸಣೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಬರಲಿ, ಪ್ರಧಾನಿ ಬರಲಿ ನಮ್ಮ ಪರಿಸ್ಥಿತಿ ಬದಲಾಗಲ್ಲ. ನೆರೆ ಬಂದಾಗ ಬರುತ್ತಾರೆ, ಭರವಸೆ ಕೊಟ್ಟು ಹೋಗುತ್ತಾರೆ.ಪರಿಹಾರ ಮಾತ್ರ ಸೂಕ್ತವಾಗಿ ಸಿಗೋದಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಕೊಡಸಣೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!