Thursday, June 30, 2022
spot_imgspot_img
spot_imgspot_img

ಹಾಸನ ಜಿಲ್ಲೆಯಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ಆತಂಕ.!

- Advertisement -
- Advertisement -

ಹಾಸನ: ಹಾಸನ ಜಿಲ್ಲೆಯ ಹಲವೆಡೆ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ಜಾವ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ನಿದ್ದೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿರುವ ಘಟನೆ ನಡೆದಿದೆ.

ಹೊಳೆನರಸೀಪುರ, ಅರಕಲಗೂಡು ತಾಲೂಕಿನಲ್ಲಿ ಲಘು ಭೂಕಂಪನ ಅನುಭವವಾಗಿದೆ. ಅರಕಲಗೂಡು ತಾಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಹಾಗೂ ಹಾಸನ ತಾಲೂಕಿನ ಮಲ್ಲೆದೇವರಪುರ, ಕಾರ್ಲೆ ಅಂಕನಹಳ್ಳಿ ಗ್ರಾಮಗಳಲ್ಲೂ ಕಂಪಿಸಿದೆ.

ಲಘು ಭೂಕಂಪನವನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ. ಮಂಗಳವಾರ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಭೀಕರ ಭೂ ಕಂಪನವಾಗಿತ್ತು ಎನ್ನಲಾಗಿದೆ.

- Advertisement -

Related news

error: Content is protected !!