Friday, April 19, 2024
spot_imgspot_img
spot_imgspot_img

ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರನನ್ನು ಗುಂಡಿಕ್ಕಿ ಕೊಂದ ಹಲ್ಲೆಕೋರರು

- Advertisement -G L Acharya panikkar
- Advertisement -

ಪಂಜಾಬ್: ಕಬಡ್ಡಿ ಕಪ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರನ್ನ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದ ಘಟನೆ ಜಲಂಧರ್ ಮಾಲಿಯನ್ ಗ್ರಾಮದಲ್ಲಿ ನಡೆದಿದೆ. ಸಂದೀಪ್ ನಂಗಲ್ ಅವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತುಗುಂಡು ಹಾರಿಸಲಾಗಿದೆ. ಈ ಬಗ್ಗೆ ಜಲಂಧರ್ (ಗ್ರಾಮೀಣ) ಉಪ ಪೊಲೀಸ್ ಅಧೀಕ್ಷಕ ಲಖ್ವಿಂದರ್ ಸಿಂಗ್ ಖಚಿತಪಡಿಸಿದ್ದಾರೆ.

ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನ ಆಳಿದವರು. ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್‌ಎ, ಯುಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಭಾರತೀಯ ಕಬ್ಬಡಿ ಸ್ಪರ್ಧಿಯಾಗಿದ್ದ ಸಂದೀಪ್, ಇತ್ತೀಚಿನ ದಿನಗಳಲ್ಲಿ ತಮ್ಮ ವಿಜಯಗಳ ಕಾರಣದಿಂದಾಗಿ ಖ್ಯಾತಿಯನ್ನ ಗಳಿಸಿದರು. ಅಥ್ಲೆಟಿಕ್ ಪ್ರತಿಭೆಯೂ ಹೌದು. ಈ ಬಗ್ಗೆ ಪೊಲೀಸರು ಕ್ಷಿಪ್ರ ಗತಿಯನ್ನು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!