Wednesday, May 8, 2024
spot_imgspot_img
spot_imgspot_img

ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ

- Advertisement -G L Acharya panikkar
- Advertisement -

ಕೆಲವರಿಗೆ ಚಾಕೋಲೇಟ್, ಬಿಸ್ಕತ್ ಇಲ್ಲದಿದ್ದರೆ ಆ ದಿನ ಪೂರ್ತಿಯಾಗುವುದೇ ಇಲ್ಲ. ದಿನವೂ ಬೆಳಗ್ಗೆ ಎದ್ದಾಗ ಕಾಫಿ ಅಥವಾ ಟೀಯೊಂದಿಗೆ ಬಿಸ್ಕತ್ ತಿನ್ನುವವರಿದ್ದಾರೆ. ಸಂಜೆ ಚಹಾದ ಜೊತೆಗೂ ಬಿಸ್ಕತ್ ತಿನ್ನುವವರಿದ್ದಾರೆ. ಬಿಸ್ಕತ್​ನಲ್ಲಿ ಕೊಬ್ಬಿನಾಂಶ ಇಲ್ಲವೆಂದು ಬಿಸ್ಕತ್ ತಿಂದೇ ಹೊಟ್ಟೆ ತುಂಬಿಸಿಕೊಳ್ಳುವವರೂ ಇದ್ದಾರೆ. ಆದರೆ, ನಾನಾ ಫ್ಲೇವರ್​ಗಳಲ್ಲಿ, ನಾನಾ ರೂಪದಲ್ಲಿ ಸಿಗುವ ಬಿಸ್ಕತ್​ಗಳು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ? ನೀವೇನಾದರೂ ಬಿಸ್ಕತ್ ಪ್ರಿಯರಾಗಿದ್ದರೆ ಅತಿಯಾಗಿ ಬಿಸ್ಕತ್ ತಿನ್ನುವ ಮುನ್ನ ಎಚ್ಚರ. ನಾವು ದಿನನಿತ್ಯ ಬಳಸುವ 60 ಪ್ರಸಿದ್ಧ ಬಿಸ್ಕತ್ ಬ್ರ್ಯಾಂಡ್​ಗಳ ಬಿಸ್ಕತ್​ಗಳಲ್ಲಿ ಕ್ಯಾನ್ಸರ್​ಕಾರಕ ಅಂಶಗಳಿವೆ ಎಂಬುದನ್ನು ಹಾಂಕಾಂಗ್ ಸಂಶೋಧಕರು ಪತ್ತೆಹಚ್ಚಿದ್ದಾರೆ.

ಈಗೀಗ ನ್ಯೂಟ್ರಿಷನ್, ಆರ್ಗಾನಿಕ್ ಮುಂತಾದ ಲೇಬಲ್​ನೊಂದಿಗೆ ಬಿಸ್ಕತ್​ಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದು ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ. ಹಾಂಕಾಂಗ್‌ನ ಅಧಿಕಾರಿಗಳು 60 ವಿವಿಧ ಬಿಸ್ಕತ್ತುಗಳನ್ನು ಅಧ್ಯಯನ ಮಾಡಿದ ನಂತರ ಬಿಸ್ಕತ್ತುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಉಂಟಾಗಬಹುದು ಎಂಬ ಅಂಶವನ್ನು ಕಂಡುಹಿಡಿದಿದ್ದಾರೆ. ಪ್ಯಾಕ್ ಮಾಡಲಾದ ಬಿಸ್ಕತ್ತುಗಳಲ್ಲಿ ಗ್ಲೈಸಿಡಾಲ್ ಮತ್ತು ಅಕ್ರಿಲಾಮೈಡ್ ಎಂಬ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ಹೊಂದಿರುವ ಅಂಶಗಳು ಪತ್ತೆಯಾಗಿವೆ.

ಬಿಸ್ಕತ್ ತಯಾರಕರು ಗ್ಲೈಸಿಡಾಲ್ ಮತ್ತು ಅಕ್ರಿಲಾಮೈಡ್ ಅನ್ನು ಬಳಸಬಹುದಾದರೂ ಈ ರಾಸಾಯನಿಕಗಳನ್ನು ಎಷ್ಟು ಬಳಸಬಹುದು ಎಂಬುದಕ್ಕೆ ಮಿತಿಗಳಿವೆ. ಬಿಸ್ಕತ್​ಗಳಿಗಾಗಿ ಯುರೋಪಿಯನ್ ಯೂನಿಯನ್ ಅಕ್ರಿಲಾಮೈಡ್ ಅನ್ನು ಒಂದು ಕೆಜಿ ಬಿಸ್ಕಟ್​ಗೆ 350 ಗ್ರಾಂಗೆ ಸೀಮಿತಗೊಳಿಸಬೇಕು ಎಂಬ ಮಾನದಂಡವನ್ನು ನೀಡಿದೆ. ಇದಕ್ಕಿಂತ ಹೆಚ್ಚು ರಾಸಾಯನಿಕ ಬಳಸಬಾರದು ಎಂದು ಕೂಡ ಉಲ್ಲೇಖಿಸಲಾಗಿದೆ.

ಸಂಶೋಧಕರು ಕನಿಷ್ಠ ನಾಲ್ಕು ಬಿಸ್ಕತ್ ಬ್ರಾಂಡ್‌ಗಳು ಈ ಮಿತಿಯನ್ನು ಮೀರಿರುವುದನ್ನು ಪತ್ತೆ ಹಚ್ಚಿದ್ದಾರೆ. ಮುಜಿ ಬ್ರಾಂಡ್​ನ ಸ್ಯಾಂಡ್‌ವಿಚ್ ಕ್ರ್ಯಾಕರ್‌ನಲ್ಲಿ 620 ಗ್ರಾಂ ಅಕ್ರಿಲಾಮೈಡ್ ಇದ್ದು ಇದು ಸುರಕ್ಷಿತ ಮಿತಿಗಿಂತಲೂ ದುಪ್ಪಟ್ಟಾಗಿದೆ. ಕಾರ್ಸಿನೋಜೆನಿಕ್ (ಕ್ಯಾನ್ಸರ್​ಕಾರಕ ಅಂಶಗಳು) ಇರುವ ಬಿಸ್ಕಟ್‌ಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಓರಿಯೋ, ಮಾರಿ ಮತ್ತು ಪ್ರೆಟ್ಜ್ ವೇಫರ್‌ ಬಿಸ್ಕತ್​ಗಳು ಕೂಡ ಇದ್ದವು ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ.
ಅಧ್ಯಯನಕ್ಕಾಗಿ ಬಳಸಿಕೊಂಡ 60 ಬಿಸ್ಕತ್​ಗಳಲ್ಲಿ 56 ಬಿಸ್ಕತ್​ಗಳಲ್ಲಿ 3 MCPD ಅಂಶಗಳಿವೆ ಎಂಬುದು ಕೂಡ ಪತ್ತೆಯಾಗಿದೆ. ಇದು ಆರ್ಗಾನಿಕ್ ರಾಸಾಯನಿಕವನ್ನು ಹೊಂದಿದ್ದು, ಕಿಡ್ನಿ ಮತ್ತು ಪುರುಷರ ಸಂತಾನೋತ್ಪತ್ತಿಯ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೂಡ ತಿಳಿದುಬಂದಿದೆ. ಸುಮಾರು 60 ಕೆಜಿ ತೂಕವಿರುವ ವಯಸ್ಕರು ಒಂದು ದಿನದಲ್ಲಿ 120 ಗ್ರಾಂ.ಗಿಂತ ಹೆಚ್ಚು ರಾಸಾಯನಿಕವನ್ನು ಸೇವಿಸಬಾರದು ಎಂದು ಶಿಫಾರಸು ಮಾಡಲಾಗಿದೆ. ಆದರೆ ಕೆಲವು ಬಿಸ್ಕತ್​ಗಳು ಪ್ರತಿ ಕೆಜಿಗೆ 2,000 ಗ್ರಾಂ 3 ಎಂಸಿಪಿಡಿ ಅಂಶವನ್ನು ಹೊಂದಿರುತ್ತವೆ.

ಅಧ್ಯಯನದಲ್ಲಿ ಬಳಸಲಾದ 33 ಬಿಸ್ಕತ್ತುಗಳಲ್ಲಿ ಅಧಿಕ ಕೊಬ್ಬು ಮತ್ತು 27 ಬಿಸ್ಕತ್​ಗಳಲ್ಲಿ ಅಧಿಕ ಸಕ್ಕರೆ ಅಂಶಗಳಿವೆ ಎಂಬುದು ಪತ್ತೆಯಾಗಿದೆ. 13 ಬಿಸ್ಕತ್​ಗಳಲ್ಲಿ ಅಧಿಕ ಸೋಡಿಯಂ ಅಂಶಗಳು ಪತ್ತೆಯಾಗಿವೆ. ಬಿಸ್ಕತ್ತುಗಳಲ್ಲಿ ಉಪ್ಪಿನ ಪ್ರಮಾಣವೂ ಅಧಿಕವಾಗಿರುತ್ತದೆ. ಸರಾಸರಿ ಸಿಹಿ ಬಿಸ್ಕಟ್ 25 ಗ್ರಾಂ ಚೀಲಕ್ಕೆ 0.4 ಗ್ರಾಂ ಉಪ್ಪನ್ನು ಹೊಂದಿರುತ್ತದೆ. ಅತಿಯಾದ ಉಪ್ಪಿನಿಂದ ವ್ಯಕ್ತಿಗಳಿಗೆ ಹೃದಯಾಘಾತ ಉಂಟಾಗುವ ಅಪಾಯವೂ ಇರುತ್ತದೆ. ಪ್ಯಾಕ್ ಮಾಡಿದ ಬಿಸ್ಕತ್​ಗಳು ಬಣ್ಣ, ಸಂರಕ್ಷಕಗಳನ್ನು ಕೂಡ ಹೊಂದಿರುತ್ತವೆ.ಕೆಲವು ಬಿಸ್ಕತ್​ಗಳು ಸಂಪೂರ್ಣ ಗೋಧಿ ಅಥವಾ ಓಟ್ ಮೀಲ್, ಫೈಬರ್ ಭರಿತ ಅಥವಾ ಸಕ್ಕರೆ ರಹಿತವೆಂದು ಜಾಹೀರಾತಿನಲ್ಲಿ ಭರವಸೆ ನೀಡುತ್ತಾರೆ. ಆದರೆ ಈ ನಿಯಮಗಳು ಕೇವಲ ಮಾರ್ಕೆಟಿಂಗ್ ಗಿಮಿಕ್‌ಗಳಾಗಿರುತ್ತವೆ.

ಸ್ವೀಡನ್​ನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, 10 ವರ್ಷಗಳಲ್ಲಿ 60,000 ಮಹಿಳೆಯರಲ್ಲಿ ವಾರಕ್ಕೆ 2ರಿಂದ 3 ಬಾರಿ ಬಿಸ್ಕತ್ತುಗಳನ್ನು ತಿನ್ನುವ ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 33ರಷ್ಟು ಹೆಚ್ಚಿದೆ. ವಾರದಲ್ಲಿ ಮೂರು ಬಾರಿ ಬಿಸ್ಕತ್ತುಗಳನ್ನು ತಿನ್ನುವ ಮಹಿಳೆಯರಲ್ಲಿ ಶೇ. 42ರಷ್ಟು ಹೆಚ್ಚು ಗಡ್ಡೆಗಳಾಗುವ ಸಾಧ್ಯತೆ ಇದೆ.

- Advertisement -

Related news

error: Content is protected !!