Thursday, May 2, 2024
spot_imgspot_img
spot_imgspot_img

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರ ಬಂಧನ

- Advertisement -G L Acharya panikkar
- Advertisement -

ಹೈದ್ರಾಬಾದ್: ಹೈದ್ರಾಬಾದ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ 17 ವರ್ಷದ ಹುಧುಗಿ ಮೇಲೆ ಗ್ಯಾಂಗ್ ರೇಪ್ ನಡೆದ ಬೆನ್ನಲ್ಲೇ, ಇದೀಗ ಮತ್ತೊಂದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕ್ಯಾಬ್ ಡ್ರೈವರ್‌ಗಳಾದ ಶೇಕ್ ಕಲೀಂ ಆಲಿ ಮತ್ತು ಮೊಹಮ್ಮದ್ ಲ್ಯೂಕ್ ಮ್ಯಾನ್ ಅಹ್ಮದ್ ಯಡ್ಜಾನಿ ಎಂದು ಗುರುತಿಸಲಾಗಿದೆ.

ಇನ್ನು ಮೇ 31 ರಂದು ಬಾಲಕಿ ನಾಪತ್ತೆಯಾದ ನಂತರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಜೂನ್ 1 ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಪೊಲೀಸರ ತಂಡ ಬಾಲಕಿಯನ್ನು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಾಲಕಿ ಒಬ್ಬಳೇ ನಡೆದು ಹೋಗುತ್ತಿದ್ದನ್ನು ನೋಡಿದ ಆರೋಪಿ ಶೇಕ್ ಕಲೀಂ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ತನ್ನ ಕಾರಿನಲ್ಲಿ ಕುಳಿರಿಸಿದ್ದು, ಬಳಿಕ ಆರೋಪಿ ಮೊಹಮ್ಮದ್ ಮನೆ ಹತ್ತಿರ ಕರೆದೊಯ್ಯುದಿದ್ದಾನೆ. ನಂತರ ಇಬ್ಬರು ಆರೋಪಿಗಳು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!