Friday, March 29, 2024
spot_imgspot_img
spot_imgspot_img

ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಬೆಳಗಲಿವೆ 12 ಲಕ್ಷ ಹಣತೆಗಳು

- Advertisement -G L Acharya panikkar
- Advertisement -

ಎಂದಿನಂತೆಯೇ ಈ ವರ್ಷವೂ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಿಸಲಾಗುತ್ತಿದೆ. ಅಯೋಧ್ಯೆ ನೆಲದ ಸಂಸ್ಕೃತಿ ಮತ್ತು ಪರಂಪರೆ ಕುರಿತು ಜಾಗೃತಿ ಮೂಡಿಸಲು ಸಿಎಂ ಯೋಗಿ ಆದಿತ್ಯನಾಥ್​​​ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆಯೋಜಿಸಿರುವ ಈ ದೀಪೋತ್ಸವ ನವೆಂಬರ್ 5 ರವರೆಗೆ ಇರುತ್ತದೆ.

ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವದ ಸಂಭ್ರಮ ಶುರುವಾಗಿದೆ. ಈ ಬಾರಿ ಒಟ್ಟು 12 ಲಕ್ಷ ಹಣತೆಗಳನ್ನು ಬೆಳಗಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ಪೈಕಿ ಸರಯೂ ನದಿ ತಟದಲ್ಲೇ 9 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅಂದಾಜು ಒಂಬತ್ತು ಲಕ್ಷ ಫಲಾನುಭವಿಗಳಿಗೆ ತಲಾ ಒಂದು ಮನೆ ನೀಡಲಾಗುತ್ತಿತ್ತು. ಹೀಗಾಗಿ 9 ಲಕ್ಷ ದೀಪ ಬೆಳಗಾಲಾಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

- Advertisement -

Related news

error: Content is protected !!