Friday, April 19, 2024
spot_imgspot_img
spot_imgspot_img

ಅಸ್ತಮಾದಿಂದ ದೂರವಿರಲು ಹೀಗೆ ಮಾಡಿ

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಧೂಳು, ವಾಹನದ ಹೊಗೆ, ಧೂಮಪಾನ ಅಭ್ಯಾಸ ಹೀಗೆ ಹಲವು ಕಾರಣಗಳಿಂದ ಹೆಚ್ಚು ಜನರಲ್ಲಿ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಮ್ಮೆ ಅಸ್ತಮಾ ಬಂದರೆ ಅದು ಕಡಿಮೆಯಾದಂತಾದರೂ ಹವಾಮಾನ ಬದಲಾದಂತೆ ಮತ್ತೆ ಮತ್ತೆ ಕಾಡುತ್ತದೆ. ಆದ್ದರಿಂದ ಅಸ್ತಮಾ ರೋಗಿಗಳು ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.

ಉಸಿರಾಟದ ಮಾರ್ಗಗಳು ಕಿರಿದಾಗುವ ಮೂಲಕ ನಾಳಗಳು ಊದಿಕೊಳ್ಳುತ್ತದೆ. ಜೊತೆಗೆ ಹೆಚ್ಚು ಲೋಳೆಯ ಅಂಶ ಉತ್ಪತ್ತಿಯಾಗಬಹುದು. ಇದು ಉಸಿರಾಟವನ್ನು ಕಷ್ಟಕರವಾಗಿಸುತ್ತದೆ ಇದರಿಂದ ಕೆಮ್ಮು ಉಬ್ಬಸ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಇದನ್ನು ಆರಂಭದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಏಕೆಂದರೆ ಇದರಿಂದ ಉಸಿರುಗಟ್ಟಿ ಸಾವು ಸಂಭವಿಸುವ ಸಾಧ್ಯತೆಗಳೂ ಇರುತ್ತದೆ.

ಹಾಗಾದರೆ ಅಸ್ತಮಾ ರೋಗಿಗಳ ದಿನಚರಿ ಹೇಗಿರಬೇಕು, ಹಿಂಸೆ ನೀಡುವ ಅಸ್ತಮಾದಿಂದ ದೂರವಿರವುದು ಹೇಗೆ ಎನ್ನುವ ಬಗ್ಗೆ ತಜ್ಞ ವೈದ್ಯೆ ಡಾ. ಅರುಣಾ ಮಂಗಳಗಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಉಸಿರುಗಟ್ಟಿಸುವ ಅಸ್ತಮಾ

ಆರಂಭದಲ್ಲಿ ಸಾಮಾನ್ಯ ನೆಗಡಿಯಂತೆ ಆರಂಭವಾಗಿ ಅಸ್ತಮಾ ಕ್ರಮೇಣ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿ ಅಸ್ತಮಾವಾಗಿ ತಿರುಗುತ್ತದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ವಿಪರೀತ ಸೀನು, ಮೂಗಿನಲ್ಲಿ ಸೋರುವಿಕೆ, ತಲೆಭಾರ, ತಲೆನೋವು, ಉಸಿರುಗಟ್ಟಿದ ಅನುಭವ ಅಸ್ತಮಾದ ಆರಂಭಿಕ ಲಕ್ಷಣಗಾಳಾಗಿವೆ.

​ಧೂಳಿನಿಂದ ದೂರವಿರುವುದು

ಅಸ್ತಮಾ ರೋಗಿಗಳು ಧೂಳಿನಿಂದ ಆದಷ್ಟು ದೂರವಿರಬೇಕು. ಕೆಲವೊಮ್ಮೆ ಮನೆ ಸ್ವಚ್ಛ ಮಾಡುವಾಗ ಹಳೆಯ ವಸ್ತುಗಳ ಮೇಲಿರುವ ಧೂಳು ಶ್ವಾಸಕೋಶಕ್ಕೆ ಹೋಗಿ ತೊಂದರೆ ಕೊಡುತ್ತದೆ. ಹೀಗಾಗಿ ವಿಶೇಷವಾಗಿ ಮಹಿಳೆಯರು ಇಂತಹ ಸಂದರ್ಭದಲ್ಲಿ ಮಾಸ್ಕ್‌ ಧರಿಸವುದು ಸೂಕ್ತ.

ಇನ್ನು ವಾಹನಗಳ ಹೊಗೆಯಿಂದಲೂ ಅಸ್ತಮಾ ಕಾಡುತ್ತದೆ. ಹೀಗಾಗಿ ಮನೆಯಿಂದ ಹೊರಹೋಗುವಾಗ ಸ್ವಚ್ಛವಾದ ಮಾಸ್ಕ್‌ ಧರಿಸಿ ಹೋಗಿ. ನೀವೆ ಬೇಕಾದರೆ ನೋಡಿ ಒಂದು ದಿನ ಹೊರಗಡೆ ಸುತ್ತಾಡಿ ಮನೆಗೆ ಬಂದು ಬಿಳಿಯ ಬಟ್ಟೆಯಲ್ಲಿ ಮುಖ ಒರೆಸಿ ಆಗ ಎಷ್ಟು ಧೂಳು ಬರುತ್ತದೆ ನೋಡಿ. ಇದೇ ಧೂಳು ಶ್ವಾಸಕೋಶಕ್ಕೆ ಹೋದರೆ ಎಷ್ಟು ಸಮಸ್ಯೆ ಎಂದು ಊಹಿಸಿ. ಆದ್ದರಿಂದ ಆದಷ್ಟು ಸುರಕ್ಷಿತವಾಗಿರಿ.

​ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಸಾಮಾನ್ಯವಾಗಿ ಅಸ್ತಮಾ ಇರುವವರಿಗೆ ಬೇಗನೆ ನೆಗಡಿ ಹರಡುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ಅಸ್ತಮಾವನ್ನು ನಿಯಂತ್ರಿಸಬಹುದು. ಇದಕ್ಕೆ ತರಕಾರಿಗಳ ಸೇವನೆಯನ್ನೂ ಹೆಚ್ಚಿಸಬೇಕು.

ಬಹುಮುಖ್ಯವಾದ ಅಂಶವೆಂದರೆ ಅಸ್ತಮಾ ಅಲರ್ಜಿಯಿಂದ ಬರುವ ಕಾಯಿಲೆಯಾಗಿದೆ. ಹೀಗಾಗಿ ಕೆಲವರಿಗೆ ಕೆಲವು ತರಕಾರಿಗಳು, ಆಹಾರ ಪದಾರ್ಥಗಳು ಅಲರ್ಜಿಯನ್ನು ಉಂಟು ಮಾಡಬಹುದು. ಅವುಗಳ ಬಗ್ಗೆ ಗಮನವಿರಲಿ. ವೈದ್ಯರ ಬಳಿ ಆಹಾರದ ಬಗೆಗಿನ ತಪಾಸಣೆ ಮಾಡಿಸಿಕೊಳ್ಳವುದು ಅಗತ್ಯವಾಗಿರುತ್ತದೆ. ಅಲ್ಲದೆ ಕಬ್ಬಿಣಾಂಶವಿರುವ ಹಾಲಿನ ಸೇವನೆ ಕೂಡ ಅಷ್ಟೇ ಅವಶ್ಯಕವಾಗಿರುತ್ತದೆ.

​ನೆಬ್ಯುಲೈಸ್ಡ್ ಚಿಕಿತ್ಸೆ

ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು ಬಳಸುವ ಚಿಕಿತ್ಸೆ ಈ ನೆಬ್ಯುಲೈಸ್ಡ್ ಚಿಕಿತ್ಸೆಯಾಗಿದೆ. ಇದು ದೇಹಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ನೆಬ್ಯುಲೈಸ್ಡ್ ಚಿಕಿತ್ಸೆ ಎಂದರೆ ವಿವಿಧ ರೀತಿ ಔಷಧಗಳನ್ನು ಒಂದು ನಾಳದಲ್ಲಿ ಹಾಕಿಡಲಾಗುತ್ತದೆ. ಅಸ್ತಮಾ ರೋಗಿಗಳನ್ನು ಇದನ್ನು ಒಂದು ಮೂಗಿಗೆ ಹಿಡಿದುಕೊಂಡು ಉಸಿರಿನಿಂದ ಎಳೆದುಕೊಳ್ಳಬಹುದು. ಇದು ಮೂಗಿನ ಮತ್ತೊಂದು ಹೊಳ್ಳೆಯಿಂದ ಹೊರಬರುತ್ತದೆ. ಇದರಿಂದ ಕಟ್ಟಿದ ಮೂಗು ಅಥವಾ ಉಸಿರಾಟ ನಿರಾಳವಾಗುತ್ತದೆ.

ಅಸ್ತಮಾ ರೋಗಿಗಳಿಗೆ ನೆಬ್ಯುಲೈಸೇಶನ್‌ ಅತೀ ಅಗತ್ಯವಾಗಿದೆ ಮತ್ತು ಉಸಿರಾಟವನ್ನು ಸರಾಗಗೊಳಿಸಲು ಇರುವ ಸುರಕ್ಷಿತ ವಿಧಾನವಾಗಿದೆ ಎನ್ನುತ್ತಾರೆ ಡಾ. ಅರುಣಾ.

​ಪ್ರಾಣಾಯಾಮದ ಅಭ್ಯಾಸ

ಅಸ್ತಮಾ ರೋಗಿಗಳಿಗೆ ಆರಾಮವಾಗಿರಲು ಪ್ರಾಣಾಯಾಮ ಅತ್ಯುತ್ತಮ ವಿಧಾನವಾಗಿದೆ. ದಿನಕ್ಕೆ ಅರ್ಧಗಂಟೆಯಾದರೂ ಪ್ರಾಣಾಯಾಮವನ್ನು ರೂಢಿಸಿಕೊಳ್ಳಿ. ಅನುಲೋಮ, ವಿಲೋಮ ಪ್ರಾಣಾಯಾಮ, ಉಜ್ಜಯನಿ ಪ್ರಾಣಾಯಾಮಗಳು ರೂಢಿಯಲ್ಲಿರಲಿ. ಇದರಿಂದ ಅಸ್ತಮಾವನ್ನು ಹೊಡೆದೋಡಿಸಬಹುದಾಗಿದೆ.

- Advertisement -

Related news

error: Content is protected !!