Thursday, April 25, 2024
spot_imgspot_img
spot_imgspot_img

ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದು ಐಫೋನ್; ಆದರೆ ಪ್ರೊಡಕ್ಟ್ ರಿಸೀವ್ ಮಾಡಿದಾಗ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್!

- Advertisement -G L Acharya panikkar
- Advertisement -

ಕೇರಳ: ಇತ್ತೀಚೆಗೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ವಸ್ತುಗಳ ಬದಲಿಗೆ ಇತರ ವಸ್ತುಗಳನ್ನು ಗ್ರಾಹಕರು ಪಡೆಯುತ್ತಿರುವ ಅದೆಷ್ಟೋ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಅಮೆಜಾನ್ ಗ್ರಾಹಕನೊಬ್ಬ ಆನ್ಲೈ​ನ್​ನಲ್ಲಿ ಆಪಲ್​ ಐಫೋನ್ 12 ಫೋನ್​ ಆರ್ಡರ್ ಮಾಡಿದ್ದಾರೆ. ಆದರೆ ಬಂದಿದ್ದು ಏನು ಗೊತ್ತಾ ಮುಂದೆ ಓದಿ…

ಕೇರಳದ ಕೊಚ್ಚಿಯ ಅಮೆಜಾನ್ ಗ್ರಾಹಕರೊಬ್ಬರು ಅಮೆಜಾಜ್ ಪೇ ಕಾರ್ಡ್ ಮೂಲಕ ಅಕ್ಟೋಬರ್ 12ರಂದು 70,900 ರೂ.ಗಳನ್ನು ಪಾವತಿಸಿ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಅಕ್ಟೋಬರ್ 15ರಂದು ಬಂದ ಬಾಕ್ಸ್​ನಲ್ಲಿ ವಿಮ್ ಸೋಪ್ ಮತ್ತು 5 ರೂ. ನಾಣ್ಯವಿತ್ತು. ಇದರಿಂದ ಆಘಾತಗೊಂಡ ಗ್ರಾಹಕ ​ ಪೊಲೀಸ್ ಠಾಣೆಗೆ ದೂರು ನೋಡಿದ್ದಾರೆ.

ತನಿಖೆಯ ಬಳಿಕ ಗ್ರಾಹಕ ಆರ್ಡರ್ ಮಾಡಿದ್ದ ಫೋನ್ ಈಗಾಗಲೇ ಜಾರ್ಖಂಡ್​ನಲ್ಲಿ ಸಪ್ಟೆಂಬರ್ ತಿಂಗಳಿನಿಂದಲೇ ಯಾರೋ ಬಳಸುತ್ತಿರುವುದು ತಿಳಿದು ಬಂದಿದೆ. ನಾವು ಅಮೆಜಾನ್ ಅಧಿಕಾರಿಗಳು ಮತ್ತು ಗಾಹಕರನ್ನು ಸಂಪರ್ಕಿಸಿದ್ದೇವೆ.

ಸೆ.25ರಿಂದ ಈ ಫೋನ್ಅನ್ನು ಜಾರ್ಖಂಡ್​ನಲ್ಲಿ ಬಳಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಆದರು ಅಕ್ಟೋಬರ್​ನಲ್ಲಿ ಆರ್ಡರ್ ಮಾಡಲಾಗಿದೆ. ಮಾರಾಟಗಾರರನ್ನು ಸಂಪರ್ಕಿಸಿದ ಬಳಿಕ ಫೋನ್ ಸ್ಟಾಕ್ ಮುಗಿದಿದೆ. ಗ್ರಾಹಕರು ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Related news

error: Content is protected !!