- Advertisement -
- Advertisement -
ನವದೆಹಲಿ: ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಲಸಿಕೆ ದಾಸ್ತಾನಿಗೆ ಆದ್ಯತೆ ನೀಡಿದೆ.

ಜುಲೈ ಅಂತ್ಯಕ್ಕೆ 20 ರಿಂದ 25 ಕೋಟಿ ಡೋಸ್ ಹಾಗೂ ಆಗಸ್ಟ್-ಸೆಪ್ಟೆಂಬರ್ ಹೊತ್ತಿಗೆ 30 ಕೋಟಿ ಲಸಿಕೆಯನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ.

ಈ ಮೂಲಕ ಮುಂದಿನ ದಿನಗಳಲ್ಲಿ ಲಸಿಕೆಯ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಜೂನ್ ತಿಂಗಳಲ್ಲಿ 9 ರಿಂದ 10 ಕೋಟಿ ಕೋವಿಶೀಲ್ಡ್ ಲಸಿಕೆ ಪೂರೈಸಲಾಗುವುದು ಅಂತ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೇಂದ್ರಕ್ಕೆ ಪತ್ರ ಬರೆದಿದೆ.

ಇನ್ನು ಜುಲೈ ತಿಂಗಳ ವೇಳೆಗೆ ಫೈಜರ್ ಲಸಿಕೆ ಭಾರತದಲ್ಲಿ ಲಭ್ಯವಾಗಿರಲಿದೆ ಅಂತ ನೀತಿ ಆಯೋಗ ತಿಳಿಸಿದೆ.


- Advertisement -








