Tuesday, June 23, 2026
spot_imgspot_img
spot_imgspot_img

ಆಪ್‌ ದ.ಕ.ಜಿಲ್ಲಾಧ್ಯಕ್ಷರಾಗಿ ಅಶೋಕ್ ಅಡಮಲೆ, ಸಂಘಟನಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಗೌಡ ಕೊಲ್ಪೆ ನೇಮಕ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಾರ್ಟಿ ಮುಂಬರುವ ವಿಧಾನಸಭಾ ಚುನವಾಣೆ ಹಿನ್ನೆಲೆಯಲ್ಲಿ ಸಂಘಟನೆಯನ್ನು ಪುನರ್ ರಚಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಅಶೋಕ್ ಅಡಮಲೆ ಅವರನ್ನು ನೇಮಕ ಮಾಡಲಾಗಿದೆ.

ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕಾಮತ್ ಅವರಿಗೆ ರಾಜ್ಯ ಸಂಘಟನೆಯಲ್ಲಿ ಜವಾಬ್ದಾರಿ ನೀಡಲಾಗಿದ್ದು, ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯದ ಚುನಾವಣೆಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಉಸ್ತುವಾರಿ ದೆಹಲಿ ಶಾಸಕ ದಿಲೀಪ್ ಪಾಂಡೆ ಅವರು ರಾಜ್ಯ ಮತ್ತು ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹೊಸ ಸಮಿತಿಗಳನ್ನು ಪ್ರಕಟಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಫ್ಲೊರಿನ್ ಗೊವಿಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪುತ್ತೂರಿನ ಪುರುಷೋತ್ತಮ ಗೌಡ ಕೊಲ್ಪೆ ಅವರನ್ನು ನೇಮಕ ಮಾಡಲಾಗಿದೆ.

- Advertisement -

Related news

error: Content is protected !!