Friday, March 29, 2024
spot_imgspot_img
spot_imgspot_img

ಇಂದಿನಿಂದ ಸಂಸತ್‌ನ ಮುಂಗಾರು ಅಧಿವೇಶನ; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ತಂತ್ರ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸೋಂಕಿನ ಆತಂಕದ ನಡುವೆಯೇ ಇಂದಿನಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇತ್ತ ಕೇಂದ್ರ ಸರ್ಕಾರ, ಒಂದಷ್ಟು ಹೊಸ ಮಸೂದೆಗಳನ್ನು ಮಂಡಿಸಿ, ಅನುಮೋದನೆ ಪಡೆಯೋ ಪ್ಲಾನ್​ನಲ್ಲಿದ್ರೆ, ಅತ್ತ ಪ್ರತಿಪಕ್ಷಗಳು ಸರ್ಕಾರವನ್ನ ಕಟ್ಟಿಹಾಕೋದಕ್ಕೆ ಚಕ್ರವ್ಯೂಹವನ್ನೇ ಸಿದ್ಧಪಡಿಸ್ತಿವೆ.

ಕೊರೊನಾ ಆತಂಕದ ನಡುವೆಯೂ 17ನೇ ಲೋಕಸಭೆಯ 2021ರ ಮಾನ್ಸೂನ್ ಅಧಿವೇಶನವು ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 13ರವರೆಗೆ, ಅಂದ್ರೆ ಒಟ್ಟು 19 ದಿನಗಳ ಕಾಲ ಈ ಅಧಿವೇಶನ ಜರುಗಲಿದೆ.

ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ, ಸಂಸತ್‌ನ ಉಭಯ ಸದನಗಳ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಇರುವ ಮಸೂದೆಗಳು ಅಂಗೀಕಾರದ ಜೊತೆಗೆ ಇನ್ನೂ 17 ಮಸೂದೆಗಳು ಮಂಡಸಿ ಅನುಮೋದನೆ ಪಡಿಯೋಕೆ ಕೇಂದ್ರ ಸರ್ಕಾರ ಸಜ್ಜಾಗಿದೆ.

ಮಂಡನೆಯಾಗುವ ಪ್ರಮುಖ ಮಸೂದೆಗಳುದಿವಾಳಿತನ ಸಂಹಿತೆ ಮಸೂದೆ, ಸೀಮಿತ ಬಾಧ್ಯತೆಯ ಪಾಲುದಾರಿಕೆಯ ಮಸೂದೆ ಹಾಗೂ ಪೆನ್ಷನ್ ಫಂಡ್ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ಮಸೂದೆಗಳನ್ನ ಈ ಬಾರಿ ಕೇಂದ್ರ ಸರ್ಕಾರ ಮಂಡಿಸೋದಕ್ಕೆ ತಯಾರಿ ನಡೆಸಿದೆ.

ಇದರ ಜೊತೆಗೆ ಸೆಂಟ್ರಲ್ ಯೂನಿರ್ವಸಿಟಿ ತಿದ್ದುಪಡಿ ಮಸೂದೆ, ಹಾಗೂ ಖಾಸಗಿ ರಂಗ ಕೂಡ ವಿದ್ಯುತ್ ಪೂರೈಕೆ ಮಾಡೋ ನಿಟ್ಟಿನಲ್ಲಿ ವಿದ್ಯುತ್​ ತಿದ್ದುಪಡೆ ಮಸೂದೆಗಳು ಮಂಡಿಸಲಿದೆ. ಇನ್ನುಳಿದಂತೆ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್ ಮೆಂಟ್ ಮಸೂದೆ, ಹಾಗೂ ಡಿಫಾಸಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಮಸೂದೆಯನ್ನೂ ಕೇಂದ್ರ ಸರ್ಕಾರ ಈ ಬಾರಿ ಮಂಡಿಸಲಿದೆ.

17 ಹೊಸ ವಿಧೇಯಕ ಮಂಡನೆಗೆ ಸರ್ಕಾರ ಸಿದ್ಧವಾಗಿದ್ರೆ ಪ್ರತಿಪಕ್ಷಗಳೂ ಕೂಡ ತಮ್ಮ ಅಸ್ತ್ರವನ್ನ ಅಧಿವೇಶನದಲ್ಲಿ ಪ್ರಯೋಗಿಸೋದಕ್ಕೆ ಸಜ್ಜಾಗಿವೆ. ಸರ್ಕಾರದ ವೈಫಲ್ಯಗಳನ್ನೇ ನೇರವಾಗಿ ಪ್ರಸ್ತಾಪಿಸಿ ಮೋದಿ ಟೀಮ್​ನ್ನು ತರಾಟೆಗೆ ತೆಗೆದುಕೊಳ್ಳೋದಕ್ಕೆ ವಿಪಕ್ಷಗಳು ಚಕ್ರವ್ಯೂಹವನ್ನೇ ಸಿದ್ಧಪಡಿಸಿಕೊಂಡಿವೆ.

ಅಧಿವೇಶನದಲ್ಲಿ ಕೊರೊನಾ 2ನೇ ಅಲೆಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಪ್ರತಿ ಪಕ್ಷಗಳು ಪ್ಲಾನ್​ ಮಾಡಿಕೊಂಡಿವೆ. ರಾಜ್ಯಗಳಲ್ಲಿ ಕೋವಿಡ್​ ನಿರ್ವಹಣೆ ಸೇರಿದಂತೆ ಲಸಿಕೆ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನ ಪ್ರಶ್ನಿಸಲು ಮುಂದಾಗೋ ಸಾಧ್ಯತೆಗಳಿವೆ. ಅಲ್ಲದೆ ನಿರಂತರವಾಗಿ ಏರುತ್ತಿರೋ ತೈಲ ಬೆಲೆ ಏರಿಕೆ ವಿಚಾರವನ್ನ ಪ್ರಸ್ತಾಪಿಸೋದಕ್ಕೆ ಪ್ಲಾನ್ ರೂಪಿಸಿದೆ.

ಕೃಷಿ ಕಾಯಿದೆಗಳ ಸಮಸ್ಯೆಗಳನ್ನು ಚರ್ಚಿಸಿ, ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋ ತಂತ್ರವನ್ನ ಪ್ರತಿಪಕ್ಷಗಳು ಹೂಡಲಿವೆ. ಸಂಸತ್ತಿನ ಉಭಯ ಸದನಗಳಲ್ಲಿ ರೈತರ ಸಮಸ್ಯೆಗಳ ಕುರಿತು ನಿಲುವಳಿ ಮಂಡಿಸಲು ಕೂಡ ಪ್ರತಿಪಕ್ಷಗಳು ಮುಂದಾಗಿಲಿವೆ ಅಂತಾ ಹೇಳಲಾಗ್ತಿದೆ.

ಹೀಗೆ ಹಲವು ವಿಷಯಗಳೊಂದಿಗೆ ಕೇಂದ್ರ ಸರ್ಕಾರದ ವಿರುದ್ಧದ ಸವಾರಿಗೆ ಪ್ರತಿಪಕ್ಷಗಳು ಸಜ್ಜಾಗಿವೆ. ಇದರ ಜೊತೆಗೆ ರೈತ ಸಂಘಟನೆಗಳು ಕೂಡ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇಂದಿನಿಂದ ಅಧಿವೇಶನ ಮುಗಿಯೋವರೆಗೆ ಅಂದ್ರೆ ಆಗಸ್ಟ್ 13ರವರೆಗೆ ಪ್ರತಿದಿನವೂ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಲು ರೈತರ ಮುಖಂಡರು ಮುಂದಾಗಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಧರಣಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಮೊದಲನೇ ದಿನದಿಂದಲೇ ಕಲಾಪ ಕಾವೇರುವ ಎಲ್ಲಾ ಸಾಧ್ಯತೆಗಳೂ ಇವೆ.

- Advertisement -

Related news

error: Content is protected !!