Friday, March 29, 2024
spot_imgspot_img
spot_imgspot_img

ಹೊಸ ‘ರೇಶನ್​ ಕಾರ್ಡ್’​ಪಡೆಯಲಿಚ್ಛಿಸುವವರಿಗೆ ಇಲ್ಲಿದೆ ಭರ್ಜರಿ ಗುಡ್​ ನ್ಯೂಸ್.​..!

- Advertisement -G L Acharya panikkar
- Advertisement -

ಸರ್ಕಾರವು ದೇಶದಲ್ಲಿರುವ ಪ್ರತಿಯೊಬ್ಬರ ಮನೆಯಲ್ಲೂ ದಿನಸಿ ಸಾಮಗ್ರಿಗೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ನ್ಯಾಯ ಬೆಲೆ ಅಂಗಡಿಯನ್ನು ಸ್ಥಾಪಿಸಿದೆ. ಕಳೆದ ವರ್ಷದಿಂದ ದೇಶದಲ್ಲಿ ‘ಒಂದು ದೇಶ ಒಂದು ಕಾರ್ಡ್ʼ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ.

ಇದರಿಂದಾಗಿ ಭಾರತದ ಪ್ರಜೆ, ದೇಶದ ಯಾವುದೇ ಮೂಲೆಯಲ್ಲಿ ಪಡಿತರ ಚೀಟಿಯನ್ನು ಬಳಕೆ ಮಾಡಬಹುದಾಗಿದೆ. ಆದರೆ ನಿಮ್ಮ ಬಳಿ ಇಲ್ಲಿಯವರೆಗೂ ರೇಶನ್​ ಕಾರ್ಡ್​ ಇಲ್ಲ ಎಂದಾದರೆ ಹೆದರಿಕೊಳ್ಳುವ ಅವಶ್ಯಕತೆ ಬೇಡ.

ನೀವು ಮನೆಯಲ್ಲೇ ಕುಳಿತು ನಿಮ್ಮ ಸ್ಮಾರ್ಟ್​ ಫೋನ್​​ನ ಸಹಾಯದಿಂದ ಆನ್​​ಲೈನ್​ ರೇಶನ್​ ಕಾರ್ಡ್​ನ್ನು ಆರ್ಡರ್​ ಮಾಡಬಹುದಾಗಿದೆ. ಇದಕ್ಕೆಂದೇ ದೇಶದ ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ರೇಷನ್​ ಕಾರ್ಡ್​ ವೆಬ್​ಸೈಟ್​ಗಳ​ನ್ನು ನಿರ್ಮಿಸಿದೆ.

ಭಾರತದ ಪ್ರತಿಯೊಬ್ಬ ನಾಗರಿಕನೂ ಪಡಿತರ ಚೀಟಿಯ​ನ್ನು ಹೊಂದಲು ಅರ್ಹನಾಗಿದ್ದಾನೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ರೇಶನ್​ ಕಾರ್ಡ್​ನಲ್ಲಿ ಸೇರಿಸಿಕೊಳ್ಳಲಾಗುತ್ತದೆ. 18 ವರ್ಷ ತುಂಬಿದ ಬಳಿಕ ಸೂಕ್ತ ದಾಖಲೆಗಳನ್ನು ನೀಡಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ರೇಶನ್​ ಕಾರ್ಡ್ ಮಾಡಲು ನೀವು ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್​ಸೈಟ್​ ಖಾತೆಗೆ ಲಾಗಿನ್ ಆಗಿರಿ.ಈ ವೆಬ್​ಸೈಟ್​ನಲ್ಲಿ Apply online for ration card ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ರೇಶನ್​ ಕಾರ್ಡ್​ನ್ನು ಪಡೆಯಲು ನಿಮ್ಮ ಐಡಿ ಪ್ರೂಫ್​ಗಳ ರೂಪದಲ್ಲಿ ವೋಟರ್​ ಐಡಿ, ಪಾಸ್​ಪೋರ್ಟ್, ಆಧಾರ್​ ಕಾರ್ಡ್, ವಾಹನ ಪರವಾನಿಗೆ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.

ರೇಶನ್​ ಕಾರ್ಡ್​ಗೆ ಅರ್ಜಿ ಸಲ್ಲಿಸಲು 05 ರೂಪಾಯಿಗಳಿಂದ 45 ರೂಪಾಯಿಗಳವರೆಗೆ ಶುಲ್ಕ ಇದೆ.ಅರ್ಜಿ ಶುಲ್ಕವನ್ನು ಭರಿಸಿದ ಬಳಿಕ ಅಪ್ಲಿಕೇಶನ್ ಅ​ನ್ನು ಸಬ್​ಮಿಟ್​ ಮಾಡಿ. ಫೀಲ್ಡ್ ವೆರಿಫಿಕೇಶನ್​ ಮಾಡಿದ ಬಳಿಕ ನಿಮ್ಮ ದಾಖಲೆಗಳು ಸೂಕ್ತವಾಗಿದ್ದರೆ ನಿಮಗೆ ಹೊಸ ರೇಶನ್​ ಕಾರ್ಡ್ ಸಿಗಲಿದೆ.

- Advertisement -

Related news

error: Content is protected !!