Tuesday, May 7, 2024
spot_imgspot_img
spot_imgspot_img

ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ

- Advertisement -G L Acharya panikkar
- Advertisement -

ನವದೆಹಲಿ: ಶನಿ ಗ್ರಹ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ. ನಭೋಮಂಡಲದ ಈ ವಿದ್ಯಮಾನ ಕಾಣಲು ಖಗೋಳವಿಜ್ಞಾನಿಗಳು ಕಾತುರರಾಗಿದ್ದಾರೆ. ಆದ್ರೆ ಭಾರತದಲ್ಲಿ ಹಗಲು ಆಗಿದ್ದರಿಂದ ಇದರ ಗೋಚರ ಆಗಲ್ಲ.

ಆಗಸ್ಟ್ 2ರ ಬೆಳಗ್ಗೆ 11.30ಕ್ಕೆ ಭೂಮಿ ಮತ್ತು ಶನಿ ಅತಿ ಸಮೀಪಕ್ಕೆ ಬರಲಿವೆ. ಈ ವಿದ್ಯಮಾನದಿಂದ ಪ್ರಕೃತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಂಭವಿಸಲ್ಲ. ಇದೊಂದು ಸೌರಮಂಡಲದ ಪ್ರಕ್ರಿಯೆ ಆಗಿರುತ್ತದೆ. ರಾತ್ರಿ ಆಗಿರುವ ದೇಶದ ಜನರು ಬರೀಗಣ್ಣಿನಿಂದ ನೋಡಬಹುದು ಎಂದು ಓಡಿಶಾ ತಾರಾಲಾಯದ ಉಪ ನಿರ್ದೇಶಕ ಪಠಾಣಿ ಸಾಮಂತ್ ಹೇಳಿದ್ದಾರೆ.

ಆಕಾಶ ಮೋಡಗಳಿಂದ ಕೂಡಿದ್ದರೆ ಶನಿ ಗ್ರಹದ ಗೋಚರ ಆಗಲ್ಲ. ಈ ವಿದ್ಯಮಾನದ ಬಳಿಕ ಗುರು ಪ್ರಕಾಶಮಾನವಾಗಿ ಕಾಣಲಾರಂಭಿಸುತ್ತದೆ. ಶನಿಯ ಸ್ಥಾನವೂ ಗುರುವಿನ ಪಶ್ವಿಮಕ್ಕೆ ಇರಲಿದೆ.

- Advertisement -

Related news

error: Content is protected !!