ವಿಟ್ಲ : ರೋಟರಿ ಕ್ಲಬ್ ಪುತ್ತೂರು ಸಿಟಿ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರವು ಇಡ್ಕಿದು ಸೇವಾ ಸಹಕಾರಿ ಸಂಘದ ‘ಶತಾಮೃತ ಆವರಣ’ ಉರಿಮಜಲು ಇಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನ ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷೆ ಡಾ| ಗೌರೀ ಪೈ ಇವರು ದೀಪಾ ಬೆಳಗಿಸುವ ಮೂಲಕ ನೇರವೇರಸಿದರು. ಈ ಕಾರ್ಯಕ್ರಮದಲ್ಲಿ ಪುತ್ತೂರು ರೋಟರಿ ಸಿಟಿ ಇದರ ಅಧ್ಯಕ್ಷ ರೊ. ಕೆ.ಪ್ರಶಾಂತ್ ಶೆಣೈ, ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷೆ ಡಾ| ಗೌರೀ ಪೈ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರೊ. ಸುಧಾಕರ್ ಶೆಟ್ಟಿ ಬಿಡಿನಮಜಲು, ರೋಟರಿ ಸಿಟಿ ಇದರ ಕಾರ್ಯದರ್ಶಿ ರೊ. ಜಯಗುರು ಆಚಾರ್, ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್., ಹಿರಿಯ ನೇತ್ರಾಧಿಕಾರಿ ರೊ. ಶಾಂತರಾಜ, ZL ಪ್ರಮೋದ್ ಮಿಲ್ಲಾರ್ ಉಪಸ್ಥಿತರಿದ್ದರು.


ಈ ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ (Wenlock) ಇದರ ಸಹಯೋಗದಲ್ಲಿ ಕೆ.ಎಂ.ಸಿ.ಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಿದ್ದರು. ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮತ್ತು ಸಲಹೆ , ಉಚಿತ ಕಣ್ಣಿನ ಹೊರೆ ಚಿಕಿತ್ಸೆ (IOL ಅಳವಡಿಕೆ), ಉಚಿತ ಲಭ್ಯ ಕನ್ನಡಕ ವಿತರಣೆ. ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು – ಇವರ ವತಿಯಿಂದ ದೃಷ್ಟಿದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ತಪಾಸಣೆಯ ನಂತರ ಅಗತ್ಯತೆ ಇರುವವರಿಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯಿದ್ದು, ಅಗತ್ಯತೆ ಇರುವವರಿಗೆ ವ್ಯವಸ್ಥೆಯನ್ನುಮಾಡಲಾಯಿತು.


ಇಡ್ಕಿದು ಸೇವಾ ಸಹಕಾರಿ ಸಂಘದ ಶತಾಮೃತ ಆವರಣದಲ್ಲಿ ನಡೆದ ಈ ಶಿಬಿರವು ಯಶಸ್ವಿಯಾಗಿದ್ದು, ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯಂತ ಸುಸಜ್ಜಿತವಾದ ವ್ಯವಸ್ಥೆಯೊಂದಿಗೆ ಶಿಬಿರವನ್ನು ಆಯೋಜಿಸಿದ್ದು, ಆಗಮಿಸಿದ್ದ ಗಣ್ಯರು ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯವನ್ನ ಶ್ಲಾಘಿಸಿದ್ದಾರೆ. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಅವರಿಗೆ ರೋಟರಿ ಕ್ಲಬ್ ಪುತ್ತೂರು ಸಿಟಿ, ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇದರ ಅಧಿಕಾರಿಗಳು ಹಾಗೂ ಆಗಮಿಸಿದ್ದ ಸಿಬ್ಬಂದಿ ವರ್ಗ ಅಭಿನಂದನೆ ತಿಳಿಸಿದ್ದಾರೆ.












