Tuesday, June 30, 2026
spot_imgspot_img
spot_imgspot_img

ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ!

- Advertisement -
- Advertisement -

ಮುಂಬೈ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈ ಹೊರವಲಯದ ಮೀರಾ ರೋಡ್ ಪ್ರದೇಶದಲ್ಲಿ ನರೇಂದ್ರ ಪಾರ್ಕ್ ಬಳಿ ಮಂಗಳವಾರ ಈ ಘಟನೆ ನಡೆದಿದೆ.

ಮೃತ ಮಹಿಳೆ ನಾಸಿನ್ ಬಾನೊ(47) ಎನ್ನಲಾಗಿದೆ. ಆಕೆಯ ಮೃತ ಮಕ್ಕಳು 21 ವರ್ಷದ ಮಗಳು ಮತ್ತು 16 ವರ್ಷದ ಮಗ ವಿಭಿನ್ನ ಸಾಮರ್ಥ್ಯವುಳ್ಳವರು (ದಿವ್ಯಾಂಗರು) ಎಂದು ತಿಳಿದುಬಂದಿದೆ.

ಬಾನೋ ತನ್ನ ಮಕ್ಕಳನ್ನು ನೋಡಿಕೊಳ್ಳದ ಗಂಡನಿಂದ ಒಂದು ವರ್ಷದ ಹಿಂದೆ ದೂರವಾಗಿದ್ದು, ಬಳಿಕ ತನ್ನ ತಂದೆಯ ಮನೆಗೆ ತೆರಳಿದ್ದರು. ವಿಚ್ಛೇದನದಿಂದ ಬಾನೊ ಖಿನ್ನಳಾಗಿದ್ದಳು ಮತ್ತು ತನ್ನಿಬ್ಬರು ಮಕ್ಕಳನ್ನು ಬೆಳೆಸುವ ಬಗ್ಗೆ ನಿರಂತರವಾಗಿ ಚಿಂತಿಸುತ್ತಿದ್ದಳು ಎಂದು ನೆರೆ ಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಮಂಗಳವಾರದಂದು ಬಾನೊ ತಂದೆ ಮನೆಗೆ ಬಂದಾಗ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ನೆರೆಹೊರೆಯವರ ಸಹಾಯದಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ ಮಹಿಳೆ, ಆಕೆಯ ಮಗಳು ಮತ್ತು ಮಗ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಆಕಸ್ಮಿಕ ಸಾವಿನ ಕೇಸ್ ದಾಖಲಿಸಿದ್ದಾರೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

driving
- Advertisement -

Related news

error: Content is protected !!